ಲಂಕಾ ಸ್ಫೋಟ ಮಹಿಳೆ ಸೇರಿ 9 ಮಾನವ ಬಾಂಬರ್ ಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೊ,ಏ.24- ಕಳೆದ ಭಾನುವಾರ ದ್ವೀಪ ರಾಷ್ಟ್ರವನ್ನೇ ತಲ್ಲಣಗೊಳಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಆತ್ಮಾಹುತಿ ದಳದ ಉಗ್ರರು ಸೇರಿಕೊಂಡು ಈ ದುಷ್ಕøತ್ಯ ನಡೆಸಿರುವುದು ತನಿಖೆಯಿಂದ ಪತ್ತೆಯಾಗಿದೆ.

ಘಟನೆಯ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿರುವ ಶ್ರೀಲಂಕಾ ಪೊಲೀಸರಿಗೆ ಕೆಲವು ಬೆಚ್ಚಿಬೀಳುವ ಸಂಗತಿಗಳು ಹೊರಬೀಳುತ್ತಿವೆ. ಘಟನೆಯ ಹೊಣೆಯನ್ನು ಐಸಿಸ್ ಉಗ್ರಗಾಮಿ ಸಂಘಟನೆ ಹೊತ್ತಿಕೊಂಡಿದೆ.

ಭಾನುವಾರ ಪವಿತ್ರ ಈಸ್ಟರ್ ದಿನದಂದು ಚರ್ಚ್, ಹೋಟೆಲ್ ಸೇರಿದಂತೆ ಒಟ್ಟು ಎಂಟು ಕಡೆ ಸ್ಫೋಟಿಸಿದ ಸರಣಿ ಬಾಂಬ್‍ನಲ್ಲಿ 9 ಮಂದಿ ಆತ್ಮಾಹುತಿ ದಳದ ಉಗ್ರರು ಭಾಗಿಯಾಗಿದ್ದಾರೆ. ಇವರಲ್ಲಿ ಮಹಿಳಾ ಬಾಂಬರ್ ಸಹ ಇದ್ದಾಳೆ.

ರಾಜಧಾನಿ ಕೊಲಂಬೊ ಸೇರಿದಂತೆ ಅನೇಕ ಕಡೆ ಎಲ್ಲೆಂದರಲ್ಲಿ ಬಾಂಬ್‍ಗಳನ್ನು ಹುದುಗಿಸಡಲಾಗಿದೆ. ನಾಗರಿಕರು ಎಚ್ಚರದಿಂದ ಇರಬೇಕೆಂದು ಶ್ರೀಲಂಕಾದ ಉಪ ರಕ್ಷಣಾ ಸಚಿವರು ಮನವಿ ಮಾಡಿಕೊಂಡಿದ್ದಾರೆ.

ನಾಗರಿಕರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿರುವುದರಿಂದ ನಮಗೆ ಹೇಗೆ ಘಟನೆಯನ್ನು ನಿಯಂತ್ರಿಸಬೇಕು ಮತ್ತು ನಾಗರಿಕರಿಗೆ ಹೇಗೆ ರಕ್ಷಣೆ ಕೊಡಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರಬರಬಾರದು. ನಿಮ್ಮ ಕುಟುಂಬದ ಸದಸ್ಯರನ್ನು ಕೆಲದಿನದ ಮಟ್ಟಿಗೆ ಕರೆದುಕೊಂಡು ಹೋಗುವುದು ಸುರಕ್ಷಿತವಲ್ಲ. ಪ್ರವಾಸಿ ತಾಣಗಳು, ಸಮುದ್ರ ತೀರಾ ಪ್ರದೇಶ ಸೇರಿದಂತೆ ಮತ್ತಿತರ ಕಡೆ ತೆರಳಬಾರದೆಂದು ಮನವಿ ಮಾಡಿದ್ದಾರೆ.

ಈಗಾಗಲೇ ಘಟನೆ ಕುರಿತಂತೆ ನಾವು 59 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಅನೇಕ ಸಂಶಯಾಸ್ಪದ ವ್ಯಕ್ತಿಗಳನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು. ಕೆಲವು ಸಮಾಜಘಾತು ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಉಗ್ರರ ಸಂಭಾವ್ಯ ದಾಳಿಯನ್ನು ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಐಸಿಸ್ ಸಂಘಟನೆಯ ಒಲವು ಹೊಂದಿರುವ ಜಹರಾನ್ ಹಸ್ಮಿ ತಮಿಳುನಾಡಿನಲ್ಲಿ ತಹೂದ್ ಜಮಾತ್ ಹೆಸರಿನಲ್ಲಿ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಮುಸ್ಲಿಂ ಸಂಘಟನೆಯಾಗಿದ್ದು, ಮಯನ್ಮಾರ್ ಮತ್ತು ಶ್ರೀಲಂಕಾದಲ್ಲಿ ಸಕ್ರಿಯವಾಗಿದೆ.

ಈ ಸಂಘಟನೆಗೆ ಇಬ್ರಾಹಿಂ ಕುಟುಂಬದ ಸದಸ್ಯರು ಕೆಲವು ಯುವಕರನ್ನು ಸೇರ್ಪಡೆ ಮಾಡಲು ಯತ್ನಿಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ರಹಸ್ಯ ಸ್ಥಳವೊಂದರಲ್ಲಿ ಕೆಲವು ಯುವಕರಿಗೆ ಜಿಹಾದಿಯ ತರಬೇತಿ ನೀಡಿ ವಿದ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸುತ್ತಾರೆ. ಈಗಾಗಲೇ ಈ ಸಂಘಟನೆಯ ಕೆಲವು ಯುವಕರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣವು ತನಿಖಾ ಹಂತದಲ್ಲಿರುವುದರಿಂದ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ