ಸಿನಿಮಾ ಹಾಲ್ ಬಳಿ ಶಂಕಾಸ್ಪದ ಮೋಟಾರ್ ಬೈಕ್, ನಿಯಂತ್ರಿತ ಸ್ಫೋಟ ನಡೆಸಿದ ಲಂಕಾ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ, ಏ.24-ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಭಾನುವಾರ ಐಸಿಸ್ ಉಗ್ರರ ಹತ್ಯಾಕಾಂಡದಲ್ಲಿ 360ಕ್ಕೂ ಹೆಚ್ಚು ಜನರು ಹತರಾದ ನಂತರ ದ್ವೀಪರಾಷ್ಟ್ರದಲ್ಲಿ ಮತ್ತೆ ಬಾಂಬ್ ಸ್ಫೋಟಗೊಳ್ಳುವ ಆತಂಕವಿದೆ.

ಇದೇ ಸಂದರ್ಭದಲ್ಲಿ ದಕ್ಷಿಣ ಕೊಲಂಬೋದ ವೆಲ್ಲಾವೆಟ್ಟಾದ ಸವೋಯ್ ಸಿನಿಮಾ ಹಾಲ್‍ನಲ್ಲಿ ಇಂದು ಬೆಳಗ್ಗೆ ಶಂಕಾಸ್ಪದ ಮೋಟಾರ್ ಬೈಕ್ ಪತ್ತೆಯಾಯಿತು. ಅದರ ಮಾಲೀಕ ಯಾರೆಂದು ಕಂಡುಬರದ ಹಿನ್ನೆಲೆಯಲ್ಲಿ ಇದರಲ್ಲಿ ಸ್ಫೋಟಕಗಳು ಇರುವ ಬಗ್ಗೆ ಅನುಮಾನಗೊಂಡ ಪೊಲೀಸರು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದರು.

ಆ ಸ್ಥಳವನ್ನು ತೆರವುಗೊಳಿಸಿದ ಬಳಿಕ, ವಿಶೇಷ ದಳವು ನಿಯಂತ್ರಿತ ಸ್ಫೋಟದ ಮೂಲಕ ಬೈಕ್‍ನನ್ನು ದೂರದಿಂದಲೇ ಸುರಕ್ಷಿತವಾಗಿ ಸ್ಪೋಟಿಸಿತು. ಆದರೆ ಮೋಟಾರ್‍ಸೈಕಲ್‍ನಲ್ಲಿ ಯಾವುದೇ ಬಾಂಬ್ ಅಥವಾ ಸ್ಪೋಟಕ ಪತ್ತೆಯಾಗಲಿಲ್ಲ.

ಮೋಟಾರ್ ಬೈಕ್ ಸವಾರರು ಮತ್ತು ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಿದಾಗ ತಮ್ಮ ದೂರವಾಣಿ ಸಂಖ್ಯೆಗಳನ್ನು ನಮೂದಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಕೆಲವೆಡೆ ಬಾಂಬ್‍ಗಳು ಪತ್ತೆಯಾಗುತ್ತಿರುವುದರಿಂದ ಕಟ್ಟೆಚ್ಚರ ವಹಿಸಿರುವ ಪೊಲೀಸರು ತೀವ್ರ ತಪಾಸಣೆ ಮುಂದುವರಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ