ಕೊರೋನಾ ಆತಂಕದ ನಡುವೆಯೂ ಶ್ರೀಲಂಕಾ ಸಂಸತ್ ಚುನಾವಣೆಗೆ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲೊಂಬೊ, ಆ.5-ಕೊರೊನಾ ಹಾವಳಿಯಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಶ್ರೀಲಂಕಾ ಸಂಸತ್ ಚುನಾವಣೆಗೆ ಇಂದು ಭಾರೀ ಬಂದೋಬಸ್ತ್ ಮತ್ತು ಕಠಿಣ ನಿಯಮಗಳ ನಡುವೆ ಮತದಾನ ನಡೆದಿದೆ.

ಪ್ರಬಲ ರಾಜಪಕ್ಸೆ ಕುಟುಂಬದ ರಾಜಕೀಯ ಪಕ್ಷವು ಸಂಸದೀಯ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಬಹತೇಕ ಖಚಿತವಾಗಿದೆ.
225 ಸದಸ್ಯರ ಬಲದ ಸಂಸತ್‍ಗಾಗಿ ಜನಪ್ರತಿನಿಧಿಗಳನ್ನು ಚುನಾಯಿಸಲು ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೆ ನಡೆಯಿತು.

ಮತದಾರರು ಮಾಸ್ಕ್‍ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮುಂದಿನ ಐದು ವರ್ಷಗಳಿಗಾಗಿ ಸಂಸದರನ್ನು ಚುನಾಯಿಸಲು 16 ದಶಲಕ್ಷ ಮತದಾರರು ಅರ್ಹತೆ ಪಡೆದಿದ್ದಾರೆ.

ಚುನಾವಣೆಗಾಗಿ ದ್ವೀಪರಾಷ್ಟ್ರಾದ್ಯಂತ 12,985 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ 8,000ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.

ಶ್ರೀಲಂಕಾ ಅಧ್ಯಕ್ಷ ಗೋಟಬಾಯಾ ರಾಜಪಕ್ಷೆ ಮತ್ತು ಅವರ ಸಹೋದರ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‍ಎಲ್‍ಪಿಪಿ) ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.

Facebook Comments

Sri Raghav

Admin