ಶ್ರೀಲಂಕಾ ಸಂಸತ್ ಚುನಾವಣಾ : ಎಸ್‍ಎಲ್‍ಪಿಪಿ ಪ್ರಚಂಡ ಜಯಬೇರಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲೊಂಬೊ, ಆ.7-ಶ್ರೀಲಂಕಾ ಸಂಸತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ನಿರೀಕ್ಷೆಯಂತೆ ಶ್ರೀಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಮತ್ತು ಅವರ ಸಹೋದರ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ನೇತೃತ್ವದ ಆಡಳಿತಾರೂಢ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‍ಎಲ್‍ಪಿಪಿ) ಭರ್ಜರಿ ಜಯ ಸಾಧಿಸಿದೆ.

ಈ ಪ್ರಚಂಡ ಗೆಲುವಿನೊಂದಿಗೆ ಎಸ್‍ಎಲ್‍ಪಿಪಿ ಮತ್ತೆ ಅಧಿಕಾರ ಗದ್ದುಗೇರಲು ಸನ್ನದ್ಧವಾಗಿದೆ. ಪ್ರಬಲ ರಾಜಪಕ್ಸೆ ಕುಟುಂಬದ ರಾಜಕೀಯ ಪಕ್ಷವು ಸಂಸದೀಯ ಚುನಾವಣೆಗಳಲ್ಲಿ ಏರಡನೇ ಮೂರು ಭಾಗದಷ್ಟು ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಜಯ ಜಯ ದಾಖಲಿಸಿದೆ. 225 ಸದಸ್ಯ ಬಲದ ಸಂಸತ್ತಿನಲ್ಲಿ ರಾಜಪಕ್ಸೆ ಸಹೋದರರ ನೇತೃತ್ವದ ಪಕ್ಷವು 145 ಸ್ಥಾನಗಳನ್ನು ಗಳಿಸಿದೆ.

ಕೋವಿಡ್-19 ಹಾವಳಿಯಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಶ್ರೀಲಂಕಾ ಸಂಸತ್ ಚುನಾವಣೆಗೆ ಬುಧವಾರ ಭಾರೀ ಬಂದೋಬಸ್ತ್ ಮತ್ತು ಕಠಿಣ ನಿಯಮಗಳ ನಡುವೆ ಮತದಾನ ನಡದಿತ್ತು. ರಾಷ್ಟ್ರ ವ್ಯಾಪಿ ಸರಾಸರಿ ಶೇ.70ರಷ್ಟು ಮತದಾನ ದಾಖಲಾಗಿತ್ತು. ಮುಂದಿನ ಐದು ವರ್ಷಗಳಿಗಾಗಿ ಸಂಸದರನ್ನು ಚುನಾಯಿಸಲು 16 ದಶಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು.

Facebook Comments