ಶ್ರೀಲಂಕಾದಲ್ಲಿ ಘನಘೋರ ಮಾರಣಹೋಮ ನಡೆಸಿದ ಉಗ್ರರು ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.23- ಇತಿಹಾಸದಲ್ಲಿ ಕಂಡು ಕೇಳರಿಯದ ಘನಘೋರ ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಕೈವಾಡ ಇರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ.

ಶ್ರೀಲಂಕಾದ ಸ್ಥಳೀಯ ಮೂಲಭೂತ ವಾದಿ ಇಸ್ಲಾಂ ಸಂಘಟನೆಯಾದ ಎನ್‍ಟಿಜೆ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ನಲಾದರೂ ಈ ರೀತಿಯ ಘನಘೋರ ದಾಳಿ ನಡೆಸುವ ಸಾಮಥ್ರ್ಯ ಇರುವುದು ಕೇವಲ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಮಾತ್ರ.

ಹೀಗಾಗಿ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಕೈವಾಡವಿರುವುದು ಸ್ಪಷ್ಟ ಎನ್ನುತ್ತಿವೆ ಪೊಲೀಸ್ ಮೂಲಗಳು.

ಕಳೆದ 2015ರಲ್ಲಿ ಭಾರತದ ಮಧುರೈನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೂ ಶ್ರೀಲಂಕಾ ಸ್ಫೋಟಕ್ಕೂ ಸಾಮ್ಯತೆ ಇರುವುದರಿಂದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಮಿಳುನಾಡು ಮತ್ತು ಸ್ಥಳೀಯ ನಿವಾಸಿಗಳನ್ನು ಬಳಸಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

ಮೂರು ಚರ್ಚ್ ಸೇರಿದಂತೆ ಎಂಟು ಕಡೆ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಆತ್ಮಾಹುತಿ ಬಾಂಬರ್‍ಗಳು ಹತರಾಗಿದ್ದಾರೆ.  ಇಂತಹ ಘನಘೋರ ದಾಳಿ ನಡೆಸುವ ಸಾಮಥ್ರ್ಯವಿರುವುದು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ನುರಿತ ಉಗ್ರಗಾಮಿಗಳಿಗೆ ಮಾತ್ರ. ಅಂತಹ ಸಂಘಟನೆಗಳ ಸಹಾಯವಿಲ್ಲದೆ ಯಾವುದೇ ಸ್ಥಳೀಯ ಉಗ್ರಗಾಮಿ ಸಂಘಟನೆಗಳಿಗೆ ಇಂತಹ ದುಷ್ಕøತ್ಯ ನಡೆಸಲು ಸಾಧ್ಯವಿಲ್ಲ.

ಒಂದು ಕಾಲದಲ್ಲಿ ಶ್ರೀಲಂಕಾವನ್ನೇ ಬೆಚ್ಚಿ ಬೀಳಿಸಿದ್ದ ಎಲ್‍ಟಿಟಿಇ ಉಗ್ರಗಾಮಿ ಸಂಘಟನೆಯನ್ನು ಬುಡಸಮೇತ ಕಿತ್ತು ಹಾಕಲಾಗಿದೆ.  ಎಲ್‍ಟಿಟಿಇ ಸಂಘಟನೆ ನಿರ್ನಾಮದ ನಂತರ ಶ್ರೀಲಂಕಾದಲ್ಲಿ ಯಾವುದೇ ಬಾಂಬ್ ದಾಳಿಗಳು ನಡೆದಿರಲಿಲ್ಲ. ಶ್ರೀಲಂಕಾ ಗುಪ್ತಚರ ಇಲಾಖೆಗೆ ಆತ್ಮಾಹುತಿ ದಾಳಿಯ ಬಗ್ಗೆ ಮಾಹಿತಿ ದೊರಕಿತ್ತಾದರೂ ಈ ಮಟ್ಟದ ದಾಳಿಯನ್ನು ನಿರೀಕ್ಷಿಸಿರಲಿಲ್ಲ.

ಯಾರೂ ಊಹಿಸದಂತಹ ಘನಘೋರ ದಾಳಿ ಶ್ರೀಲಂಕಾ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವುದರಿಂದ ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಸಂಘಟನೆ ಕೈವಾಡವಿರುವ ಗುಮಾನಿ ವ್ಯಕ್ತವಾಗಿದೆ.

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟಕ್ಕೆ ಮೂರು ತಿಂಗಳ ಹಿಂದೆಯೆ ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ. ಮೂರು ತಿಂಗಳಿನಿಂದ ಯಾವುದೇ ಸುಳಿವು ನೀಡದೆ ಏಕಾಏಕಿ ಎಂಟು ಕಡೆ ಸರಣಿ ಬಾಂಬ್ ದಾಳಿ ನಡೆಸಿ ಭಾರತೀಯರು ಸೇರಿದಂತೆ 290ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆಯಲಾಗಿದೆ.

ಇದಲ್ಲದೆ ಶ್ರೀಲಂಕಾದ ಇತರ ಕೆಲವು ಪ್ರಮುಖ ಪ್ರದೇಶಗಳ ಮೇಲೂ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಆದರೆ ಕೊಲಂಬೊ ಬಾಂಬ್ ಸ್ಫೋಟದ ನಂತರ ಎಚ್ಚೆತ್ತ ಶ್ರೀಲಂಕಾ ಅಪರಾಧ ವಿಭಾಗದ ಪೊಲೀಸರು 85ಕ್ಕೂ ಹೆಚ್ಚು ಜೀವಂತ ಬಾಂಬ್‍ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ. ಮಾತ್ರವಲ್ಲ ಕ್ಷಿಪ್ರಕಾರ್ಯಾಚರಣೆ ನಡೆಸಿ 25 ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಘನಘೋರ ಕೊಲಂಬೊ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಗೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳು ಮುಂದೆ ಬಂದಿರುವುದರಿಂದ ಸರಣಿ ಬಾಂಬ್ ಸ್ಫೋಟದ ಹಿಂದೆ ಯಾವ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಕೈವಾಡ ಇದೆ ಎಂಬುದು ಶೀಘ್ರದಲ್ಲೇ ಬಯಲಾಗುವ ಸಾಧ್ಯತೆ ಇದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin