ಸಿದ್ದರಾಮಯ್ಯನವರೇ ನೀವು ಪಕ್ಷಾಂತರ ಮಾಡಿಲ್ಲವೇ..? : ರಾಮುಲು ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ನ.21- ರಾಜ್ಯದ ಹಿಂದಿನ ಸಮ್ಮಿಶ್ರ ಸರಕಾರದ ದುರಾಡಳಿತವನ್ನು ಸಹಿಸಲಾರದೆ ರಾಜಿನಾಮೆ ನೀಡಿದ 15 ಜನ ಶಾಸಕರನ್ನು ಪಕ್ಷಾಂತರಿಗಳು ಎಂದು ಪದೇ, ಪದೇ ಜರಿಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಮೊದಲು ಬಿಡಬೇಕು ಎಂದು ಆರೋಗ್ಯ ಸಚಿವ ಬಿ.ರಾಮುಲು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕೂಡ ವಕೀಲರಾಗಿದ್ದು. ಪಕ್ಷಾಂತರ ಕಾಯ್ದೆ ಬಗ್ಗೆ ಮಾತನಾಡುವ ನೀವು? ಪಕ್ಷಾಂತರ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ನೀವು ಮಾತ್ರ ಜೆಡಿಎಸ್ ತೊರೆದು ಅಹಿಂದ ಕಟ್ಟುವ ನೆಪವೊಡ್ಡಿ ಕಾಂಗ್ರೆಸ್ ಸೇರಬಹುದು.

ಬೇರೆಯವರು ಸೇರಬಾರದು ಎಂಬ ಇಬ್ಬಂದಿ ನೀತಿ ಎಷ್ಟುಸರಿ?. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಹುದ್ದೆಯನ್ನು ಪಡೆದು ಅಧಿಕಾರ ಅನುಭವಿಸಿ. ಅಹಿಂದ ಸಂಘಟನೆ ಮಾಡದೆ. ಎಲ್ಲವರ್ಗಗಳ ಕಡೆಗಣಿಸಿ. ಅಧಿಕಾರ ಕಳೆದುಕೊಂಡು ಇನೊಬ್ಬರನ್ನು ದೂಷಿಸುವುದು ಸರಿಯಲ್ಲ ಎಂದು ಖಂಡಿಸಿದರು. ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಯುತ್ತಿದ್ದು

. ಇನ್ನೂ ಮೂರುವರೆ ವರ್ಷಗಳ ಕಾಲ ಸರಕಾರ ನಡೆಸಲು ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಸರಕಾರ ಭದ್ರಗೊಳಿಸಬೇಕು ಎಂದು ಮನವಿ ಮಾಡಿದರು. ಉಪಚುನಾವಣೆ ಇದೇ ಪ್ರಥಮವಲ್ಲ ಹಿಂದೆಯು ನಡೆದಿದೆ. ತಾಲೂಕಿನ ಜನತೆ ಅವರಿವರ ಮಾತಿಗೆ ಕಿವಿಕೊಡದೆ ಬಿಜೆಪಿಯ ಹೆಚ್.ವಿಶ್ವನಾಥ್‍ರನ್ನು ಗೆಲ್ಲಿಸಬೇಕೆದರು.

ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಪ್ರಕಾರ ಪರಿಹಾರ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಈ ಬಾರಿ ರಾಜ್ಯದಲ್ಲಿ ಮಾತ್ರವಲ್ಲದೇ ಇನ್ನೂ ಹಲವು ರಾಜ್ಯದಲ್ಲಿ ಜಲಪ್ರಳಯ ಸಂಭವಿಸಿ, ನೆರೆ ಹಾನಿಯಾಗಿದ್ದರಿಂದ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಪ್ರಕಾರ ಇಡೀ ದೇಶದ ಉದ್ದಗಲಕ್ಕೂ ಪರಿಹಾರವನ್ನು ನೀಡಿದೆ. ಹಾಗೆ ನಮ್ಮ ರಾಜ್ಯಕ್ಕೂ 1200 ಕೋಟಿ ಪರಿಹಾರ ನೀಡಿದೆ. ರಾಜ್ಯ ಸರಕಾರ 6 ಸಾವಿರ ಕೋಟಿ ಹಣ ನೀಡುವಲ್ಲಿ ಸಫಲವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಮೇಶ್‍ಕುಮಾರ್, ತಾ. ಅಧ್ಯಕ್ಷ ಬಿ.ಎಸ್.ಯೋಗಾನಂದ್ ಕುಮಾರ್, ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್, ಮಾಜಿ ಎಂ.ಎಲ್ಸಿ. ಸಿದ್ದರಾಜು, ಬಿಜೆಪಿ ಜಿಲ್ಲಾ ಮುಖಂಡ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ರಮೇಶ್ ಕುಮಾರ್, ನಗರಾಧ್ಯಕ್ಷ ರಾಜೇಂದ್ರ ಇದ್ದರು.

Facebook Comments