ಕೆಲಸ ಮಾಡುವ ಸಮಯ, ಕೆಲಸ ಮಾಡಲು ಬಿಡಿ : ಸಿದ್ದುಗೆ ಶ್ರೀರಾಮುಲು ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.6- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವಿ ಬಿ.ಶ್ರೀರಾಮುಲು ಮಧ್ಯೆ ಟ್ವೀಟ್ ಸಮರ ಮುಂದುವರಿದಿದ್ದು, ಇದೀಗ ಶ್ರೀರಾಮುಲು ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರಗಳ ಮೇಲೆ ಆರೋಪ ಮಾಡುವುದಕ್ಕೂ ಮುನ್ನ, ತಾವು ಕಾಶ್ಮೀರದಿಂದ- ಕನ್ಯಾಕುಮಾರಿಯವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ ರಾಜ-ಮಹಾರಾಜರ ಬಗ್ಗೆ ಗಮನಹರಿಸುವುದು ಒಳಿತಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಸಿದ್ದರಾಮಯ್ಯನವರೇ, ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಯಲ್ಲಿದ್ದಾರೆ. ಕೊರೊನಾವನ್ನು ಗೆಲ್ಲಬೇಕಿದೆ. ಇದು ಕೆಲಸ ಮಾಡುವ ಸಮಯ. ನಾಡಿನ ಜನತೆಗೆ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಟ ಮಟ್ಟದ ಸಹಕಾರವನ್ನು ಜನತೆಯ ಪರವಾಗಿ ಕೇಳುತ್ತೇನೆ ಎಂದು ಹರಿಹಾಯ್ದಿದ್ದಾರೆ.

Facebook Comments