ಚಿತ್ರದುರ್ಗ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಶ್ರೀರಾಮುಲು ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19-ಚಿತ್ರದುರ್ಗ ಜಿಲ್ಲಾಯನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಜಿಲ್ಲಾ ಎಂದು ಘೋಷಿಸುವಂತೆ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಜಿಲ್ಲಾ ಎಂದು ಘೋಷಿಸುವಂತೆ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ನಾನು ಮತ್ತು ನಮ್ಮ ಜಿಲ್ಲಾಯ ಎಲ್ಲ ಶಾಸಕರೂ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲಾಯಲ್ಲಿ ಈರುಳ್ಳಿ ಮತ್ತು ಇತರೆ ಬೆಳೆಗಳು ಮಳೆಯಿಂದ ನಾಶವಾಗಿ ರೈತರಿಗೆ ತುಂಬಲಾರದ ನಷ್ಟವಾಗಿದೆ. ಈವರೆಗೂ ಸುಮಾರು 7,302 ಹೆಕ್ಟೇರ್ ಪ್ರದೇಶದಲ್ಲಿ 9.87 ಕೊಟಿ ರೂಪಾಯಿಗಳ ಮೊತ್ತದಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

ಜನ, ಜಾನುವಾರು ಮತ್ತು ಮೂಲ ಸೌಕರ್ಯ ಸೇರಿದಂತೆ ಅಂದಾಜು 91.87 ಲಕ್ಷ ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿದಿದ್ದು, ನಷ್ಟ ಹೊಂದಿರುವ ಯಾವುದೇ ರೈತನೂ ಬೆಳೆ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುವುದು. ನಮ್ಮ ಸರ್ಕಾರ ರೈತರ ಜೊತೆಗಿದ್ದು, ಯಾರೂ ದೃತಿಗೆಡಬೇಕಿಲ್ಲ ಎಂದು ತಿಳಿಸಿದ್ದಾರೆ.

Facebook Comments