“ರೌಡಿ ಥರ ಇದ್ದೀಯ..ಮೊದ್ಲು ಕೂದಲು ಕಟ್ ಮಾಡಿಸ್ಕೋ” : ಶ್ರೀರಾಮುಲುಗೆ ಹೀಗೆ ಹೇಳಿದ್ದು ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10-ಒಳ್ಳೆ ರೌಡಿ ಥರ ಇದ್ದೀಯ… ಮೊದ್ಲು ಉದ್ದದ ಕೂದಲನ್ನು ಕಟ್ ಮಾಡಿಸ್ಕೋ ಎಂದು ಶ್ರೀರಾಮುಲು ಅವರಿಗೆ ಸುಷ್ಮಾಸ್ವರಾಜ್ ಬುದ್ಧಿವಾದ ಹೇಳಿದರಂತೆ.
ವಿಧಾನಸಭೆಯಲ್ಲಿಂದು ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು 1999ರಲ್ಲಿ ಬಳ್ಳಾರಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸುಷ್ಮಸ್ವರಾಜ್ ಬಿಜೆಪಿ ಅಭ್ಯರ್ಥಿಯಾಗಿ,

ಕಾಂಗ್ರೆಸ್‍ನ ಅಭ್ಯರ್ಥಿ ಸೋನಿಯಾಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿ ಕಾರ್ಪೊರೇಟರ್ ಆಗಿದ್ದ ನನ್ನನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು. ಚುನಾವಣೆಯಲ್ಲಿ ನಾನು ಮತ್ತು ಸುಷ್ಮಾಸ್ವರಾಜ್ ಇಬ್ಬರೂ ಸೋತೆವು.

ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಬೀಳ್ಕೊಡುವ ಸಂದರ್ಭದಲ್ಲಿ ಸುಷ್ಮಾಸ್ವರಾಜ್ ಅವರು ನನ್ನನ್ನು ನೋಡಿ ಉದ್ದದ ಕೂದಲು ಬಿಟ್ಟು ರೌಡಿ ಥರ ಕಾಣ್ತೀಯಾ. ನೀನೀಗ ವಿಧಾನಸಭೆ ಚುನಾವಣೆ ಅಭ್ಯರ್ಥಿ. ಕೂದಲು ಕಟ್ ಮಾಡಿಸಿಕೋ ಎಂದು ತಾಕೀತು ಮಾಡಿದರು.

ನನಗಿಷ್ಟವಿಲ್ಲದಿದ್ದರೂ ಕೂದಲು ಕಟ್ ಮಾಡಿಕೊಲ್ಳಬೇಕಾಯಿತು ಎಂದು ಶ್ರೀರಾಮುಲು ಹೇಳಿದರು. ಅಲ್ಲಿಂದ ಆರಂಬವಾದ ಸುಷ್ಮಸ್ವರಾಜ್ ಮತ್ತು ನಮ್ಮ ಬಾಂಧವ್ಯ ತಾಯಿ-ಮಗನಂತೆ ಮುಂದುವರೆದಿತ್ತು. ಅವರು ನನಗೆ ಮಕ್ಕಳ ಸ್ಥಾನ ಕೊಟ್ಟಿದ್ದರು. ಅವರ ಮಕ್ಕಳಿಗೂ ನನ್ನನ್ನು ಅಣ್ಣ ಎಂದು ಪರಿಚಯ ಮಾಡಿದ್ದರು ಎಂದು ಹೇಳಿದರು.

Facebook Comments