ಸಿದ್ದು ಹಗಲುಗನಸು ಕಾಣ್ತಿದ್ದಾರೆ : ಶ್ರೀರಾಮುಲು ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

ಗದಗ,ಅ.14- ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೇ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಪ್ರತಿಪಕ್ಷ ನಾಯಕರು ಜನಪರ ಆಡಳಿತಕ್ಕೆ ಸಲಹೆ ನೀಡುವದು ಬಿಟ್ಟು ಕೇವಲ ರಾಜ್ಯ ಸರಕಾರದ ವಿರುದ್ದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಮೊದಲ ಬಾರಿಗೆ ಬೇಟಿ ನೀಡಿದ ಸಚಿವರು ವಿರೇಶ್ವರ ಪುಣ್ಯಾಶ್ರಮ ಮತ್ತು ತೋಂಟದಾರ್ಯ ಮಠಕ್ಕೆ ಭೇಟಿ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿರುವ ಸರಕಾರಿ ಆಸ್ಪತ್ರೆಗಳ ವೈದ್ಯರು ಉತ್ತಮ ಸೇವೆ ಮಾಡುವ ಮುಖಾಂತರ ಖಾಸಗಿ ವೈದ್ಯರೊಂದಿಗೆ ಸ್ಪರ್ಧೆ ಮಾಡಬೇಕಿದೆ.

ಸರಕಾರಿ ಆಸ್ಪತ್ರೆಗಳ ಉತ್ತಮ ಸೇವೆಗಾಗಿ ಅಗತ್ಯ ಸವಲತ್ತುಗಳನ್ನು ಸರಕಾರ ನೀಡಲು ಬದ್ಧವಾಗಿದೆ. ಆಶಾ ಕಾರ್ಯಕರ್ತರ ಗೌರವಧನವನ್ನು ಸಂಪುಟ ಸಭೆಯಲ್ಲಿ 500 ಹೆಚ್ಚಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರನ್ನು ನೇರವಾಗಿ ನೇಮಕ ಮಾಡುವಂತೆ ಡಿಎಚ್‍ಓಗೆ ಸೂಚಿಸಲಾಗಿದೆ. ತಜ್ಞ ವೈದ್ಯರ ಹಾಗೂ ದಂತ ವೈದ್ಯರನ್ನು ರಾಜ್ಯ ಸರಕಾರದಿಂದ ನೇಮಕ ಮಾಡಲು ಸೂಚನೆ ನೀಡಲಾಗಿದೆ.

ಉಪಚುನಾವಣೆ ನಂತರ ಬಿಜೆಪಿ ಸರಕಾರ ಬೀಳಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಆಗುವದು ಗೊತ್ತಿತ್ತೆ. ದೈವ ಬಲದಿಂದ ಸರಕಾರ ರಚನೆಯಾಗಿದೆ ಎಂದರು. ನೆರೆ ಹಾವಳಿಗೆ ಕೇಂದ್ರ ಸರಕಾರ 1200 ಕೋಟಿ ಪರಿಹಾರ ನೀಡಿದೆ.

ಯುಪಿಎ ಸರಕಾರ ಅವಧಿಯಲ್ಲಿ ಎಷ್ಟು ಪರಿಹಾರ ನೀಡಿದ್ದೀರಿ ಎಂಬುದನ್ನು ತಿಳಿಸಿರಿ ಎಂದರು. ಉಪಮುಖ್ಯಮಂತ್ರಿ ಹುದ್ದೆ ಸಮಯ ಬಂದಾಗ ಒಲಿಯಲಿದೆ. ಭಾರತಿಯ ಜನತಾ ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ಅನೀಲ ಮೆಣಸಿನಕಾಯಿ ಹಾಜರಿದ್ದರು.

Facebook Comments

Sri Raghav

Admin