ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 19- ಜೂನ್ 2019ರ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಹಾಜರಾಗುವ ಪುನರಾವರ್ತಿತ ಅಭ್ಯರ್ಥಿಗಳಪರೀಕ್ಷಾ ಶುಲ್ಕವನ್ನು ಪಾವತಿಸಲು ದಿನಾಂಕವನ್ನು ವಿಸ್ತರಿಸಿದೆ.

ಪ್ರತಿ ಅಭ್ಯರ್ಥಿಗೆ ರೂ.400 ದಂಡ ಶುಲ್ಕದೊಂದಿಗೆ ಪರೀಕ್ಷಾರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕರಿಸಲು ಮತ್ತು ಆನ್ಲೈನ್ನಲ್ಲಿ ಅಭ್ಯರ್ಥಿಗಳ ವಿವರಗಳನ್ನು ಅಪ್ಲೋಡ್ ಮಾಡಲು ವಿಸ್ತರಣೆ ಮಾಡಿದ ಕೊನೆಯ ದಿನಾಂಕ ಮೇ 20ರೊಳಗೆ ಅನ್ಲೈನ್ನಲ್ಲಿ ಅಭ್ಯರ್ಥಿಗಳ ವಿವರಗಳನ್ನು ಅಪ್ಲೋಡ್ ಮಾಡಿದ ಪ್ರಕರಣಗಳ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ಬ್ಯಾಂಕಿಗೆ ಪಾವತಿಸಲು ಕೊನೆಯ ದಿನಾಂಕ ಮೇ 21.

ನೆಫ್ಟ್ ಚಲನ್ ಮೂಲಕ ಪರೀಕ್ಷಾ ಶುಲ್ಕವನ್ನು ಬ್ಯಾಂಕ್ಗೆ ಪಾವತಿಸಿದ ಬ್ಯಾಂಕ್ನಮೂಲ ಚಲನ್ಪ್ರತಿ ಮತ್ತು ಇತರೆ ದಾಖಲೆಗಳನ್ನು ಮಂಡಳಿಗೆ ತಲುಪಿಸಲು ಮೇ 22 ಕೊನೆಯ ದಿನಾಂಕವಾಗಿದೆ.

ಆನ್ಲೈನ್ನಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ಅಪ್ಲೋಡ್ ಮಾಡಿದ ಪ್ರಕರಣಗಳಿಗೆ ಆನ್ಲೈನ್ನಲ್ಲಿ ಬ್ಯಾಂಕ್ ಚಲನ್ ಜನರೇಟ್ ಆಗುವುದಿಲ್ಲ. ಬದಲಿಗೆ ಸದರಿ ದಂಡಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಮಂಡಳಿಯ ನೆಫ್ಟ್ ಚಲನ್ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಜಮೆ ಮಾಡುವುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin