SSLC ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ಕೋವಿಡ್-19 ಹಿನ್ನೆಲೆ ದೇಶಾದಾದ್ಯಂತ ಲಾಕ್‍ಡೌನ್ ಜಾರಿಯಿದ್ದ ಕಾರಣ ಮುಂದೂಡಲಾಗಿದ್ದ 2019-2020ನೆ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಇದೀಗ ಪರೀಕ್ಷೆಯನ್ನು ಜೂ.25 ರಿಂದ ಜು.4ರವರೆಗೆ ನಡೆಸ ಲಾಗುತ್ತಿದೆ. ವೇಳಾಪಟ್ಟಿ ಬದಲಾವಣೆಯಾಗಿ ರುವುದರಿಂದ ಹಾಗೂ ವಲಸೆ ಕಾರ್ಮಿಕರ ಮಕ್ಕಳು ಮತ್ತು ವಸತಿ ನಿಲಯಗಳಲ್ಲಿ ಇದ್ದು,

ವ್ಯಾಸಂಗ ಮಾಡಿದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ನೀಡಿದ್ದರಿಂದ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಪರಿಷ್ಕೃತ ಅಂತಿಮ ಪ್ರವೇಶ ಪತ್ರಗಳನ್ನು ಜೂ.10 ರಂದು ಮಂಡಳಿ ಜಾಲತಾಣದಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಈ ಹಿಂದೆ ನೀಡಿದ ಪ್ರವೇಶ ಪತ್ರಗಳು ಅಸಿಂಧುವಾಗಿದ್ದು, ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪರಿಷ್ಕøತ ಪ್ರವೇಶ ಪತ್ರಗಳನ್ನು ಮಂಡಳಿಯ ಜಾ ಲತಾಣದ ಶಾಲಾ ಲಾಗ್‍ಇನ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಲು ಸೂಚಿಸಲಾಗಿದೆ.

ವಲಸೆ ಕಾರ್ಮಿಕರ ಮಕ್ಕಳು ಮತ್ತು ವಸತಿ ನಿಲಯಗಳಲ್ಲಿ ಇದ್ದು ವ್ಯಾಸಂಗ ಮಾಡಿದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬದಲಾವಣೆ ಅವಕಾಶ ನೀಡಿದೆ. ಅದರಂತೆ ಶಾಲೆಯಿಂದಲೇ ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರಗಳಿಗೆ ಆ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ.

ಶಾಲಾ ಮುಖ್ಯ ಶಿಕ್ಷಕರು ಮರು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆ ಮಾಡಿರುವ ಬಗ್ಗೆ ದೃಢೀಕರಿಸಿ ಕರಿಸುವುದು. ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮೂರು ವಿಧಾನದಲ್ಲಿ ಪಡೆಯಬಹುದಾಗಿದೆ.

ವ್ಯಾಸಂಗ ಮಾಡಿದ ಶಾಲಾ ಲಾಗ್‍ಇನ್ ನಲ್ಲಿ ಮರು ಹಂಚಿಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ಶಾಲಾ ಲಾಗ್‍ಇನ್‍ನಲ್ಲಿ ಮರು ಹಂಚಿಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ಬ್ಲಾಕ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗ್ ಇನ್‍ನಲ್ಲಿ ಪಡೆಯಬಹುದಾಗಿದೆ.

Facebook Comments