ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಿರಿ : ವಿದ್ಯಾರ್ಥಿಗಳಿಗೆ ಶಿಕ್ಷಕರು-ಪೋಷಕರಿಂದ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.10- ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿ ಪರೀಕ್ಷೆಯೂ ಒಂದು. ಈ ವಾರ್ಷಿಕ ಪರೀಕ್ಷೆ ಪಾಸ್ ಮಾಡಲು ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಕಾರಣ ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್ ವಿದ್ಯಾರ್ಥಿಗಳು ತಾವು ಮುಂದೆ ಆಯ್ದುಕೊಳ್ಳಲು ಬಯಸುವ ಕೋರ್ಸ್‍ಗಳಿಗೆ ಪ್ರಮುಖವಾಗಿರುತ್ತದೆ.

ಈ ಬಾರಿ ಕೋವಿಡ್ ಸಂದಿಗ್ಧತೆಯ ನಡುವೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದೇ ತಿಂಗಳ 19 ಮತ್ತು 22ರಂದು ಪರೀಕ್ಷೆ ನಡೆಯಲಿದೆ. ಪ್ರತೀ ವರ್ಷ ಆರು ದಿನಗಳ ಕಾಲ ನಡೆಯುತ್ತಿದ್ದ ವಾರ್ಷಿಕ ಪರೀಕ್ಷೆ, ಈ ಬಾರಿ ಕೋವಿಡ್ ಕಾರಣದಿಂದ ಎರಡು ದಿನಗಳಲ್ಲಿ ಮುಗಿಯಲಿದೆ.

ಈ ಸಲ ವಿಶೇಷವಾಗಿ ರೈಟಿಂಗ್ ಬದಲಿಗೆ ಟಿಕ್ಕಿಂಗ್ ಮೂಲಕ ನಡೆಯಲಿದೆ. ಹೊಸ ಮಾದರಿ ಪರೀಕ್ಷೆಯಿಂದಾಗಿ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲಗಳು ಇದ್ದೇ ಇರುತ್ತವೆ. ಅಂತಹ ಗೊಂದಲ, ಆತಂಕಗಳನ್ನು ಹೋಗಲಾಡಿಸಲು ಶಿಕ್ಷಣ ತಜ್ಞರು ಹಾಗೂ ಮಕ್ಕಳ ತಜ್ಞರು ವಿದ್ಯಾರ್ಥಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

# ಕೋವಿಡ್ ಭಯ ಬೇಡ: ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಯಾಕೆಂದರೆ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಿಡ್ ಅಷ್ಟೊಂದು ಪರಿಣಾಮ ಬೀರುವುದಿಲ್ಲ.  ಕೋವಿಡ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ಇದ್ದರೂ, ಅದು ಅಷ್ಟೊಂದು ದೃಢಪಟ್ಟಿಲ್ಲ. ಪರೀಕ್ಷಾ ಕೇಂದ್ರಕ್ಕೆ ಹೋದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಇದ್ದೇ ಇರುತ್ತಾರೆ. ಅಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿದರೆ ಯಾವುದೇ ತೊಂದರೆ ಇಲ್ಲ.

ಪರೀಕ್ಷಾ ಕೇಂದ್ರದಲ್ಲಿ ಸ್ನೇಹಿತರೊಂದಿಗೆ ಚರ್ಚೆ ಮಾಡುವುದಾಗಲಿ, ಗುಂಪು ಸೇರುವುದಾಗಲಿ ಮಾಡದೇ ಇರುವುದು ಉತ್ತಮ. ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವುದು, ಸಾಧ್ಯವಾದರೆ ಡಬಲ್ ಮಾಸ್ಕ್ ಹಾಕಿಕೊಳ್ಳುವುದು, ಕೈಗಳು ಮುಖಕ್ಕೆ ಹೋಗದಂತೆ ನೋಡಿಕೊಳ್ಳುವುದು, ಸ್ವಚ್ಛತೆ ಕಡೆ ಗಮನಕೊಡಬೇಕಿದೆ.

# ಪರೀಕ್ಷಾ ಮಾದರಿ ಅರ್ಥ ಮಾಡಿಕೊಳ್ಳಿ
ಈ ಬಾರಿ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಮಾದರಿ ಕುರಿತು ಮೊದಲು ತಿಳಿದುಕೊಳ್ಳಬೇಕು. ಇದು ಪರೀಕ್ಷೆ ಎದುರಿಸಲು ಇರುವ ಸುಲಭ ಮಾರ್ಗಗಳಲ್ಲಿ ಒಂದು. .ಕೋವಿಡ್ ಸೋಂಕು ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಮಾನಸಿಕವಾಗಿ ಪರಿಣಾಮ ಬೀರಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮಾನಸಿಕ ಒತ್ತಡವನ್ನು ಹೇಗೆ ಪಾಸಿಟಿವ್ ಆಗಿ ಬದಲಾಯಿಸಿಕೊಳ್ಳುವುದು ಎಂದು ತಿಳಿಯಬೇಕು.

ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾಗುತ್ತದೆ.ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವುದರಿಂದ ಅವರಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸುವ ಕೆಲಸ ಮಾಡಬೇಕು. ಮನೆಯಲ್ಲಿ ಪೋಷಕರು, ಸಂಬಂಧಿಕರು ಸ್ನೇಹಿತರು ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಯಾವುದೇ ಅಡಚಣೆ ಬಂದರೂ, ಅದರ ಕುರಿತು ಗಮನ ಕೊಡದೆ ಓದುವ ಕಡೆ ಏಕ್ರಾಗತೆ ವಹಿಸಬೇಕು.

# ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ :
ಬಹು ಆಯ್ಕೆಯ ಪ್ರಶ್ನೆಗಳು ಈ ಬಾರಿ ಹೊಸದೇನಲ್ಲ. ಈ ಹಿಂದೆಯು 40 ಅಂಕ ಇದ್ದವು, ಉಳಿದಂತೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಬೇಕಿತ್ತು. ಆದರೆ, ಈ ಬಾರಿ ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳೇ ಆಗಿರುವುದರಿಂದ ಇನ್ನಷ್ಟು ಸುಲಭವಾಗಿ ಇರಲಿದೆ.

ಪರೀಕ್ಷೆ ಶುರುವಾಗುವ ಮುಂಚೆ ಯಾವುದೇ ಗೊಂದಲಗಳು ಇದ್ದರೂ, ಕೊಠಡಿ ಮೇಲ್ವಿಚಾರಕರ ಬಳಿ ಮಾತನಾಡಿ ಬಗೆಹರಿಸಿಕೊಳ್ಳಿ. ಅವರು ನೀಡುವ ಸೂಚನೆಗಳನ್ನು ಪಾಲಿಸಿ, ಗಾಬರಿ ಪಡುವ ಅಗತ್ಯವಿಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.

Facebook Comments