ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಮೊಬೈಲ್ ಆಪ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.12- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೊನೆ ನಿಮಿಷದ ಪರೀಕ್ಷೆಯ ಸಿದ್ಧತೆಗಾಗಿ ಸಹಾಯ ಮಾಡಲು ಫಾಸ್ಟ್‍ಟ್ರ್ಯಾಕ್ ಪುನರಾವರ್ತನೆ ಇ-ಕೋಸ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಮಾರ್ಚ್ ತಿಂಗಳ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಕೋಚಿಂಗ್ ಕಂಪನಿಯಾದ ಲರ್ನ್‍ಕ್ಯಾಬ್ ಈ ಅಪ್ಲಿಕೇಶನ್‍ಅನ್ನು ರಚಿಸಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಅನ್ನು ಉಪಯೋಗಿಸಬಹುದು.

ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಡಾ.ಅಶ್ವತ್ ನಾರಾಯಣ, ಕಳೆದ ವರ್ಷ ತೀವ್ರ ಪ್ರವಾಹ ಮತ್ತು ಬರಗಾಲದಿಂದಾಗಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಸಿದ್ಧತೆ ಅವರುಗಳಿಗೆ ಒಂದು ಸವಾಲು. ಸಂಪೂರ್ಣ ಪಠ್ಯಕ್ರಮವನ್ನು 12 ದಿನಗಳಲ್ಲಿ ಪುನರಾವರ್ತಿಸಲು ಲರ್ನ್‍ಕ್ಯಾಬ್ ತನ್ನ ಆಪ್ ಮೂಲಕ ಈಗ ಸಹಾಯ ಮಾಡುತ್ತಿದೆ ಎಂದರು.

ಇದು ಅತ್ಯುತ್ತಮ ತಯಾರಿಗಾಗಿ ಸಾಕಷ್ಟು ಸಮಯವನ್ನು ಉಳಿಸುತ್ತದೆ ಮತ್ತು ಖಂಡಿತವಾಗಿಯೂ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಶೇ.15ರಿಂದ 20ರಷ್ಟು ಹೆಚ್ಚುವರಿ ಅಂಕಗಳನ್ನು ಸೇರಿಸುತ್ತದೆ. ಉಳಿದಿರುವ ಸಮಯ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳನ್ನು ಕೋರಿದರು. ಲರ್ನ್‍ಕ್ಯಾಬ್‍ನ ಸಿಇಒ ರವಿಶಂಕರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಡಾ.ಗುರುರಾಜ ಕರಜಗಿ, ಬಾಲಸುಬ್ರಮಣ್ಯಂ, ಗಣೇಶ್ ಜಿ.ಎಸ್. ಅವರು ಈ ಆನ್‍ಲೈನ್ ಕಲಿಕಾ ವೇದಿಕೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಮ್ಮ ಸಲಹೆ ಮತ್ತು ಪರೀಕ್ಷೆಯ ತಯಾರಿಗಾಗಿ ಸಲಹೆಗಳನ್ನು ನೀಡಿದ್ದಾರೆ.

ಅವರ ಮಾತುಗಳ ವಿಡಿಯೋಗಳು ಪ್ರತಿಯೊಬ್ಬರಿಗೂ ಡೌನ್‍ಲೋಡ್ ಮಾಡಲು ಮತ್ತು ವೀಕ್ಷಿಸಲು ಲರ್ನ್‍ಕ್ಯಾಬ್ ಅಪ್ಲಿಕೇಶನ್‍ನಲ್ಲಿ ಉಚಿತವಾಗಿ ಲಭ್ಯವಿದೆ. ಇದಲ್ಲದೆ ಆನ್‍ಲೈನ್ ತರಗತಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದೆ ಎಂದು ತಿಳಿಸಿದರು. ಸಿಒಒ ದತ್ತಾತ್ರಿ ಎಚ್ ಎಂ, ಲರ್ನ್‍ಕ್ಯಾಬï ನಿರ್ದೇಶಕ ಶ್ರೀ ಪ್ರಸಾದ್ ರಾಜು ಮತ್ತು ಜೆ.ಶಿವಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು.

ಲರ್ನ್‍ಕ್ಯಾಬ್ ಮಾಹಿತಿ: ಲರ್ನ್‍ಕ್ಯಾಬï ಬೆಂಗಳೂರು ಮೂಲದ ಆನ್‍ಲೈನ್ ಎಜು-ಟೆಕ್ ಕಂಪನಿಯಾಗಿದೆ. ಚಾರ್ಟರ್ಡ್ï ಅಕೌಂಟನ್ಸಿ (ಸಿಎ), ಕಂಪನಿ ಕಾರ್ಯದರ್ಶಿ (ಸಿಎಸ್) ಮತ್ತು ವೆಚ್ಚ ಮತ್ತು ನಿರ್ವಹಣಾ ಅಕೌಂಟನ್ಸಿ (ಸಿಎಂಎ) ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ತಮ್ಮ ಆನ್‍ಲೈನ್ ವೆಬ್ ಮತ್ತು ಮೊಬೈಲï ಅಪ್ಲಿಕೇಶನ್‍ಗಳ ಮೂಲಕ ತರಬೇತಿ ನೀಡುತ್ತಿದೆ.

ಇದು ಬೋಧನಾ ವೃತ್ತಿಪರರು ಅಭಿವೃದ್ಧಿಪಡಿಸಿದ ಉದಯೋನ್ಮುಖ ವೇದಿಕೆಯಾಗಿದೆ ಮತ್ತು ಆನ್‍ಲೈನ್ ಶಿಕ್ಷಣ ವಿಭಾಗದಲ್ಲಿ ಹೊಸ ಟ್ರೆಂಡ್‍ಗಳನ್ನು ಸೃಷ್ಟಿಸುತ್ತಿದೆ.  ಪ್ಲಾಟ್‍ಫಾರ್ಮ್‍ನ ಪ್ರಾಥಮಿಕ ಗುರಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಯನ್ನು ನೀಡುವುದು. ಫೆಬ್ರವರಿ 2019 ರಲ್ಲಿ ಪ್ರಾರಂಭವಾದಾಗಿನಿಂದ ಈಗಾಗಲೇ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದುವರಿದು, ಈ ಸಂಸ್ಥೆ ಈಗ ಹೆಚ್ಚಿನ ಕೋರ್ಸ್‍ಗಳನ್ನು ತನ್ನ ಆಪ್ ನಲ್ಲಿ ದೊರಕಿಸುವತ್ತ ಸಾಗಿದೆ.

Facebook Comments