ವಿಕಾಸಸೌಧದಲ್ಲಿ ಕಚೇರಿಗೆ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಿದ ಸಚಿವ ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.13- ಸಹಕಾರಿ ಇಲಾಖೆಯಲ್ಲಿ ಸುಧಾರಣೆ ಹಾಗೂ ಅಗತ್ಯ ಬದಲಾವಣೆ ತರುವ ಬಗ್ಗೆ ಹಿರಿಯ ಸಹಕಾರಿಗಳ ಸಭೆ ಕರೆದು ಸಲಹೆ ಪಡೆಯಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ವಿಕಾಸಸೌಧ ನೆಲಮಹಡಿಯ (ಕೊಠಡಿ ಸಂಖ್ಯೆ38-39)ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಗಳು ತಮಗಿಷ್ಟವಾದ ಸಹಕಾರ ಖಾತೆಯನ್ನು ನೀಡಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದರು.

ಸಹಕಾರಿಗಳಿಗೆ ಹೆಚ್ಚು ಅನುಕೂಲವಾಗಿದ್ದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ನಿಲ್ಲಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಯಶಸ್ವಿನಿ ಯೋಜನೆ ಒಳ್ಳೆಯ ಯೋಜನೆಯಾಗಿತ್ತು. ಯಾವ ಕಾರಣಕ್ಕೆ ನಿಲ್ಲಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು. ತಮಗೂ ಸಹಕಾರದ ಬಗ್ಗೆ ಮಾಹಿತಿದೆ. ಸಹಕಾರಿಗಳ ಅನುಕೂಲಕ್ಕಾಗಿ ಸಾಧ್ಯವಿರುವ ಬದಲಾವಣೆ ಹಾಗೂ ಸುಧಾರಣೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದರು.

ಈಗಾಗಲೇ ಬಜೆಟ್ ಪೂರ್ವ ಸಿದ್ದತಾ ಸಭೆ ನಡೆದಿದೆ. ಹೀಗಾಗಿ ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಆನಂತರ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. ನಮ್ಮ ಸ್ನೇಹಿತರ್ಯಾರಿಗೂ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ, ಅತೃಪ್ತಿ ಇಲ್ಲ.

ಮಾಜಿ ಶಾಸಕರಾದ ಪ್ರತಾಪ್ ಗೌಡ ಹಾಗೂ ಮುನಿರತ್ನ ಅವರ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಶೀಘ್ರ ಇತ್ಯರ್ಥವಾಗುವ ನಿರೀಕ್ಷೆಯಿದೆ. ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದರು. ಕಚೇರಿ ಪೂಜೆ ಸೋಮಶೇಖರ್‍ಅ ವರನ್ನು ಪಕ್ಷದ ಮುಖಂಡರು, ನಾಯಕರು, ಅಭಿಮಾನಿಗಳು, ಹಿತೈಷಿಗಳು ಅಭಿನಂದಿಸಿದರು.

Facebook Comments