ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.14- ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಟಾಂಗಾದಲ್ಲಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಟಾಂಗಾ ಸವಾರಿ ಮಾಡಲು ಪ್ರವಾಸಿಗರಿಗೆ ಪರೋಕ್ಷವಾಗಿ ಪ್ರೇರೇಪಿಸಿದರು.

ಒಂದು ಕಾಲದಲ್ಲಿ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಸವಾರಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅದರಲ್ಲೂ ದಸರಾ ಸಂದರ್ಭದಲ್ಲಿ ಟಾಂಗಾದಲ್ಲಿ ಮೈಸೂರು ಸುತ್ತುವ ಪ್ರವೃತ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಸಚಿವರ ಟಾಂಗಾ ಸವಾರಿ ಮೈಸೂರಿನ ಜನತೆಯನ್ನು ಆಕರ್ಷಿಸಿತು.

ನಗರದ ಗವರ್ನಮೆಂಟ್ ಹೌಸ್ ನಿಂದ ಅರಮನೆ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸಚಿವರು ನಗರದ ದೀಪಾಲಂಕಾರ, ದಸರಾ ನೋಡಲು ಆಗಮಿಸಿದ ಪ್ರವಾಸಿಗರನ್ನು ಕಂಡು ಸಂತಸಪಟ್ಟರು.

ಸಚಿವರು ಟಾಂಗಾ ಸವಾರಿ ವೇಳೆ ಮೂಡಾ ಅಧ್ಯಕ್ಷ ಹೆಚï.ವಿ.ರಾಜೀವ, ಅರಣ್ಯ ವಸತಿ ಮತ್ತು ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

Facebook Comments