ಬಂದ್ ಗೆ ಕರೆಕೊಟ್ಟಿದ್ದು ರೈತರಲ್ಲ : ಸಚಿವ ಎಸ್.ಟಿ.ಎಸ್.

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ. 27- ನಾಳೆಯ ಬಂದ್‍ಗೆ ರೈತರು ಕರೆ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ಬಂದ್‍ಗೆ ರೈತರು ಕರೆ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ ಎಂದರು.

ಎಪಿಎಂಸಿ ತಿದ್ಧುಪಡಿ ಕಾಯ್ದೆ ಕುರಿತು ರೈತರ ವಿರೋಧಿಯಲ್ಲ. ಆದರೆ, ರೈತ ಮುಖಂಡರಿಗೆ ಇದರ ಬಗ್ಗೆ ವಿರೋಧವಿದೆ ಎಂದ ಅವರು, ರಾಜಕಾರಣಕ್ಕಾಗಿ ತಿದ್ದುಪಡಿ ಕಾಯ್ದೆ ವಿರೋಧ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರು ಕಾಟಾಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಡಿವೈಡ್ ಅಂಡ್ ರೂಲ್ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು. ಆದರೆ, ಅವರು ಸುಮ್ಮನೆ ಕಾಟಾಚಾರಕ್ಕೆ ಧ್ವನಿಮತದ ಮೂಲಕ ಕೇಳಿದ್ದಾರೆ. ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.

Facebook Comments

Sri Raghav

Admin