ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಗೆಲುವು, ಸಂಸದರಿಗೆ ಸಿಹಿ ಹಂಚಿ ಸಂಭ್ರಮಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಡಿ.11- ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಂಸದರನ್ನು ಕರೆಸಿ ಚಪ್ಪಾಳೆ ಹೊಡೆಸಿ ಸಿಹಿ ಹಂಚಿ ಸಂಭ್ರಮಿಸಿದರು. ಸಂಸತ್‍ನ ಪ್ರಧಾನಿ ಕಚೇರಿಗೆ ಖುದ್ದು ರಾಜ್ಯದ ಸಂಸದರನ್ನು ಆಹ್ವಾನಿಸಿದ ನರೇಂದ್ರ ಮೋದಿ ಅವರು, ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು.

ಸಂಸತ್‍ನ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಸಂಸದರನ್ನು ಕಚೇರಿಗೆ ಬರುವಂತೆ ಸೂಚಿಸಿದ ಮೋದಿ ಅವರು, ಫಲಿತಾಂಶದ ವಿವಿರ ಪಡೆದು ಯಡಿಯೂರಪ್ಪ ಗೌರ್ಮೆಂಟ್ ಸಸ್ಟೈನ್ (ಸ್ಥಿರ) ವಂಡರ್‍ಫುಲ್ ಮಾರ್ಜಿನ್ ವಿನ್ನಿಂಗ್ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲಿಯಾ ಫ್ರಿಂಡ್ಸ್ ಎಂದು ಚಪ್ಪಾಳೆ ಹೊಡೆಸಿದ ಮೋದಿ, ರಾಜ್ಯದ ಜನತೆ ಸ್ಥಿರ ಮತ್ತು ಅಭಿವೃದ್ದಿಗಾಗಿ ಪಕ್ಷಕ್ಕೆ ಮತ ಹಾಕಿದ್ದಾರೆ. ಇದಕ್ಕಾಗಿ ಕರ್ನಾಟಕದ ಜನತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು. ಕೇವಲ ರಾಜ್ಯದ ಸಂಸದರಲ್ಲದೆ, ತಮ್ಮ ಕಚೇರಿಗೆ ಇತರೆ ರಾಜ್ಯಗಳ ಸಂಸದರನ್ನು ಆಹ್ವಾನಿಸಿದ್ದ ಮೋದಿ, ಎಲ್ಲರಿಗೂ ಸಿಹಿ ವಿತರಿಸಿ ಎಂದು ತಮ್ಮ ಸಿಬ್ಬಂದಿಗೆ ಸೂಚಿಸಿದರು.

ಕಳೆದ ಸೋಮವಾರದ ಕರ್ನಾಟಕ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿತ್ತು. ಇದಕ್ಕಾಗಿ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

Facebook Comments