ನಿದ್ದೆಯಲ್ಲೂ ಟ್ರಾಫಿಕ್ ಪೊಲೀಸರಿಗೆ ಬೆಚ್ಚಿಬೀಳುತ್ತಿದ ವಾಹನ ಸವಾರರಿಗೆ ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20- ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ವಿಧಿಸಲಾಗುತ್ತಿದ್ದ ದಂಡ ಮೊತ್ತದ ಕಾಯ್ದೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ನೂತನ ಪರಿಷ್ಕøತ ದರ ಇಂದು ಸಂಜೆಯಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಸಾರಿಗೆ ಹೊರಡಿಸಿರುವ ಪರಿಷ್ಕøತ ದಂಡದ ಪ್ರಕಾರ ಮದ್ಯಪಾನ ಸೇವನೆ ಹಾಗೂ 18 ವರ್ಷದೊಳಗಿನ ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಈಗಾಗಲೇ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದಂಡದ ಮೊತ್ತ ಯಥಾಸ್ಥಿತಿಯಲ್ಲೇ ಇರಲಿದೆ.

ಕೇಂದ್ರ ಸರ್ಕಾರದ ಮೋಟಾರು ವಾಹನ(ತಿದ್ದುಪಡಿ) ಮಸೂದೆ ಕಾಯ್ದೆ ಪ್ರಕಾರ ಮದ್ಯಸೇವಿಸಿ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ಹಾಗೂ ಅಪ್ರಾಪ್ತರು ಸಿಕ್ಕಿಬಿದ್ದರೆ 7,500 ರೂ. ದಂಡ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರದ ಉದ್ದೇಶಿತ ಕಾಯ್ದೆಗೆ ಗುಜರಾತ್ ಸರ್ಕಾರ ತಿದ್ದುಪಡಿ ಮಾಡಿತ್ತು.

ಈಗ ಕರ್ನಾಟಕ ಸರ್ಕಾರ ಇದೇ ಮಾದರಿಯನ್ನು ಮಾನದಂಡವಾಗಿಟ್ಟುಕೊಂಡು ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಕಾನೂನು ಮತ್ತು ಗೃಹ ಇಲಾಖೆ ಕೂಡ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಒಪ್ಪಿಗೆ ಸೂಚಿಸಿದೆ. ಇದರಂತೆ ರಾಜ್ಯದಲ್ಲಿ ಇನ್ನು ಮುಂದೆ ಹೆಲ್ಮೆಟ್ ರಹಿತ ಚಾಲನೆ ಮಾಡಿದರೆ 500 ರೂ, ಚಾಲನಾ ಪರವಾನಗಿ (ಡಿಎಲ್) ಇಲ್ಲದವರಿಗೆ 2500, ಅಪಾಯಕಾರಿ ಚಾಲನೆ ಮಾಡಿದರೆ 3000 ರೂ. ದಂಡ ಬೀಳಲಿದೆ.

ಗುಜರಾತ್‍ನಲ್ಲೂ ನಿಯಮ ಉಲ್ಲಂಘಿಸಿದವರಿಗೆ ಇಷ್ಟೇ ಮೊತ್ತದ ದಂಡವನ್ನು ವಿಧಿಸಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರವೂ ಇಂದಿನಿಂದಲೇ ಅನ್ವಯವಾಗುವಂತೆ ನಿಯಮವನ್ನು ಜಾರಿ ಮಾಡಲಿದೆ.

ಗುಜರಾತ್‍ನಲ್ಲಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದಿರುವುದು- 1,000 ರಿಂದ 500 ರೂ, ಅಂಬುಲೆನ್ಸ್‍ಗೆ ಅಡ್ಡಿ ಮಾಡಿದರೆ-10,000 ದಿಂದ 1,000 ರೂ, ಪಿಯುಸಿ ಪಾಸಾಗದೇ ವಾಹನ ಹೊಂದಿದ್ದರೆ -10,000ದಿಂದ 3,000 ರೂ.ಪರಿಷ್ಕೃತ ದಂಡದ ಪ್ರಮಾಣವನ್ನು ವಿಧಿಸಲಾಗುತ್ತಿದೆ.

ಗುಜರಾತ್‍ನಲ್ಲೇ ಜಾರಿಗೆ ತಂದಿರುವ ನಿಯಮವನ್ನೇ ರಾಜ್ಯದಲ್ಲೂ ಅನುಸರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದರು. ಅದರಂತೆ ಇಂದು ಸಂಜೆಯಿಂದಲೇ ಪರಿಷ್ಕøತ ದಂಡ ಪ್ರಮಾಣ ರಾಜ್ಯದಲ್ಲೂ ಜಾರಿಗೆ ತರಲಾಗಿದೆ.

# ಪರಿಷ್ಕೃತ ದಂಡದ ಪ್ರಮಾಣ :
ಮದ್ಯಪಾನ ಸೇವನೆ -10,000 ರೂ.
ಅಪ್ರಾಪ್ತರ ವಾಹನ ಚಾಲನೆ -7,5000 ರೂ.
ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸದಿದ್ದರೆ 500 ರೂ
ಅಂಬುಲೆನ್ಸ್‍ಗೆ ಅಡ್ಡಿ ಮಾಡಿದರೆ 1,000 ರೂ,
ಪಿಯುಸಿ ಪಾಸಾಗದೇ ವಾಹನ ಹೊಂದಿದ್ದರೆ – 3,000 ರೂ.

Facebook Comments

Sri Raghav

Admin