ಏಕತಾ ಪ್ರತಿಮೆಗೆ ಸಂಪರ್ಕಿಸುವ 8 ರೈಲುಗಳಿಗೆ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.17- ಸರ್ದಾರ್ ವಲ್ಲಭಬಾಯಿ ಅವರ ಏಕತಾ ಪ್ರತಿಮೆ ಇರುವ ಕೆವಾಡಿಯಾ ನಗರಕ್ಕೆ ದೇಶದ ವಿವಿಧ ನಗರಗಳಿಂದ ಸಂಚರಿಸುವ ಎಂಟು ರೈಲು ಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಗುಜರಾತ್‍ನ ಕೆವಾಡಿಯಾ ನಗರದಲ್ಲಿ ಸರ್ದಾರ್ ವಲ್ಲಭಬಾಯಿ ಅವರ ಏಕತಾ ಪ್ರತಿಮೆ ಇದೆ. ಇಲ್ಲಿಗೆ ವಾರಣಾಸಿ, ದಾದಾರ್, ಅಹಮದಾಬಾದ್, ಹಜ್ರತ್ ನಿಜಾಮುದ್ದಿನ್, ರೇವಾ, ಚೆನೈ ಹಾಗೂ ಪ್ರತಾಪ್‍ನಗರದಿಂದ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಈ ರೈಲು ಸಂಪರ್ಕದಿಂದ ಏಕತಾ ಪ್ರತಿಮೆಯ ಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನವೊಂದಕ್ಕೆ ಒಂದು ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ಅಂದಾಜಿಸಿದ್ದಾರೆ.
ಬುಡಕಟ್ಟು ಪ್ರದೇಶವಾಗಿರುವ ಕೆವಾಡಿಯಾದಲ್ಲಿ ರೈಲು ಸಂಪರ್ಕದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

Facebook Comments