ಇಂಗ್ಲೆಂಡ್‍ಗೆ ಕಳ್ಳಸಾಗಣೆಯಾಗಿದ್ದ 9ನೇ ಶತಮಾನದ ಶಿವನ ವಿಗ್ರಹ ಭಾರತಕ್ಕೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜು.30- ರಾಜಸ್ತಾನ ದೇವಸ್ಥಾನವೊಂದರಲ್ಲಿ ಕಳವು ಮಾಡಲ್ಪಟ್ಟು ಇಂಗ್ಲೆಂಡ್ ಕಳ್ಳಸಾಗಣೆಯಾಗಿದ್ದ 9ನೆ ಶತಮಾನದ ಅಪರೂಪದ ಶಿವನ ವಿಗ್ರಹ ಇಂದು ಭಾರತಕ್ಕೆ ಹಿಂದಿರುಗಲಿದೆ.

ಆಟಮುಕುಟ ಮತ್ತು ತ್ರಿನೇತ್ರ ಆಕಾರದೊಂದಿಗೆ ಚಾತುರ ಭಂಗಿಯಲ್ಲಿರುವ ನಟರಾಜ/ನಟೇಶ ಶಿಲಾ ಮೂರ್ತಿ ನಾಲ್ಕು ಅಡಿಗಳಷ್ಟು ಎತ್ತರವಿದ್ದು, ಪ್ರತಿಹರ ಶೈಲಿಯಲ್ಲಿದೆ.

ರಾಜಸ್ತಾನದ ಬರೋಲಿಯಲ್ಲಿರುವ ಘಟೇಶ್ವರ ಮಂದಿರದಿಂದ 1998ರ ಫೆಬ್ರವರಿಯಲ್ಲಿ ಈ ಶಿವನ ವಿಗ್ರಹವನ್ನು ಕಳವು ಮಾಡಲಾಗಿತ್ತು. 9ನೆ ಶತಮಾನದ ಅತ್ಯಂತ ಅಪರೂಪದ ಈ ನಟರಾಜನ ವಿಗ್ರಹವನ್ನು ಬ್ರಿಟನ್‍ಗೆ ಕಳ್ಳಸಾಗಣೆ ಮಾಡಲಾಗಿದೆ ಎಂಬ ಸಂಗತಿ 2003ರಲ್ಲಿ ದೃಢಪಟ್ಟಿತ್ತು.

ನಂತರ ನಡೆದ ರಾಜತಾಂತ್ರಿಕ ಮಾತುಕತೆಗಳ ಬಳಿಕ ಇಂದು ಈ ವಿಗ್ರಹವು ಇಂಗ್ಲೆಂಡ್‍ನಿಂದ ಭಾರತ ಪುರಾತತ್ವ ಸರ್ವೆ ಇಲಾಖೆ(ಎಎಸ್‍ಐ)ಗೆ ಹಸ್ತಾಂತರಗೊಳ್ಳಲಿದೆ.

Facebook Comments

Sri Raghav

Admin