ಬೆಂಗಳೂರಲ್ಲಿ ಬೌ ಬೌ ಹಾವಳಿ, ಬಾಲಕಿ ಮೇಲೆ ದಾಳಿ ಮಾಡಿದ ನಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Dog-Attack

ಬೆಂಗಳೂರು, ಜೂ.8- ನಗರದಲ್ಲಿ ಮತ್ತೆ ಬೌ ಬೌ ದಾಳಿ ಆರಂಭವಾಗಿದೆ. ತಿಂಡಿ ತರಲು ಅಂಗಡಿಗೆ ತೆರಳಿದ್ದ ಬಾಲಕಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಾಯಗೊಳಿಸಿರುವ  ಘಟನೆ ಚಾಮರಾಜಪೇಟೆಯ ಆಜಾದ್‍ನಗರದಲ್ಲಿ ನಡೆದಿದೆ. ನಾಯಿ ಹಿಂಡಿನ ದಾಳಿಯಿಂದ ಗಾಯಗೊಂಡಿರುವ ಬಾಲಕಿಯನ್ನು ಚೇತನ್ಯಶೆಟ್ಟಿ (10) ಎಂದು ಗುರುತಿಸಲಾಗಿದೆ.  ಚೇತನ್ಯಶೆಟ್ಟಿ ನಿನ್ನೆ ರಾತ್ರಿ ಅಂಗಡಿಗೆ ತೆರಳಿ ವಾಪಸಾಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ನಾಯಿ ಬಾಲಕಿಯ ಕಾಲು, ಹೊಟ್ಟೆ, ಕೈ ಮತ್ತಿತರ ಭಾಗಗಳಿಗೆ ಕಚ್ಚಿ ಪರಾರಿಯಾಗಿದೆ. ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಚೇತನ್ಯಶೆಟ್ಟಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  ದಾಳಿ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಸಿಬ್ಬಂದಿ ಇಂದು ಬೆಳಗ್ಗೆ ನಾಯಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin