ಬೆಂಗಳೂರಲ್ಲಿ ಬೌಬೌ ಹಾವಳಿ : ಬೀದಿ ನಾಯಿಗಳ ದಾಳಿಗೆ ಬಾಲಕ ಸಾವು-ಬಾಲಕಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25-ರಾಜಧಾನಿಯಲ್ಲಿ ಬೀದಿ ನಾಯಿಗಳ ಉಪಟಳ ನಿಂತಿಲ್ಲ. ನಾಯಿ ದಾಳಿಗೆ ಬಾಲಕ ನರಳಾಡಿ ಪ್ರಾಣಬಿಟ್ಟರೆ, ಮತ್ತೊಂದು ಪ್ರಕರಣದಲ್ಲಿ ಬಾಲಕಿಗೆ ಗಂಭೀರ ಗಾಯವಾಗಿದೆ.

ಗುಲ್ಬರ್ಗಾ ಮೂಲದ ಮಲ್ಲಪ್ಪ ಎಂಬುವರ ಪುತ್ರ ದುರ್ಗೇಶ್(5) ನಾಯಿ ದಾಳಿಗೆ ತುತ್ತಾದ ಬಾಲಕ. ಕೂಲಿ ಅರಸಿಕೊಂಡು ಮಲ್ಲಪ್ಪ ತನ್ನ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ನಗರದ ಸೋಲದೇವನಹಳ್ಳಿಯ ಅಜ್ಜೇಗೌಡನ ಪಾಳ್ಯದಲ್ಲಿ ಈ ಕುಟುಂಬ ವಾಸವಾಗಿದೆ.

ಇಂದು ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ಬಂದಿದ್ದ ತಾಯಿ ಜೊತೆ ದುರ್ಗೇಶ್ ಸಹ ಬಂದಿದ್ದನು. ತಾಯಿ ಕೆಲಸದಲ್ಲಿ ನಿರತರಾಗಿದ್ದಾಗ ದುರ್ಗೇಶ್ ಆಟವಾಡುತ್ತಿದ್ದನು.ಈ ವೇಳೆ ನಾಯಿಯೊಂದು ದಾಳಿ ಮಾಡಿ ಮನಬಂದಂತೆ ಕಚ್ಚಿ ಸಾಯಿಸಿದೆ. ಈ ಘಟನೆಯಿಂದಾಗಿ ಬಾಲಕನ ಪೋಷಕರ ರೋದನ ಮುಗಿಲುಮುಟ್ಟಿತ್ತು.

ಬಾಲಕಿಗೆ ಗಾಯ: ನಗರದ ನೀಲಸಂದ್ರ ರೋಸ್‍ಗಾರ್ಡನ್‍ನಲ್ಲಿ ಮಳೆ ಬಳಿ ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ.

ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಬಂದು ನಾಯಿಗಳನ್ನು ಓಡಿಸುವ ಮೂಲಕ ಆಕೆಯ ಪ್ರಾಣ ರಕ್ಷಿಸಿದ್ದಾರೆ. ಬೀದಿನಾಯಿಗಳ ಉಪಟಳದ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin