ನೃತ್ಯಾಭ್ಯಾಸ ಮಾಡುತ್ತಲೇ ಕುಸಿದು ಬಿದ್ದು ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಜ.24- ಶಾಲಾ ವಾರ್ಷಿಕೋತ್ಸವದ ನಿಮಿತ್ತ ನೃತ್ಯಾಭ್ಯಾಸದ ವೇಳೆ ವಿದ್ಯಾರ್ಥಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಹೃದಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪೂಜಿತಾ(14) ಮೃತಪಟ್ಟಿರುವ ಬಾಲಕಿ.ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಪೂರ್ವ ತಯಾರಿಯಲ್ಲಿ ಭಾಗವಹಿಸಿದ್ದ ಪೂಜಿತ ನೃತ್ಯಾಭ್ಯಾಸ ಮಾಡುತ್ತಿದ್ದಳು.

ಗುಂಪು ನೃತ್ಯದ ನಡುವೆ ಪೂಜಿತಾ ಇದ್ದಕ್ಕಿದ್ದ ಹಾಗೆ ನಿತ್ರಾಣಗೊಂಡಿದ್ದಾಳೆ. ಕುಳಿತಿದ್ದ ಪೂಜಿತಾ ಏಕಾಏಕಿ ಮುಂದಕ್ಕೆ ಮುಗ್ಗರಿಸಿ ಬಿದ್ದಿದ್ದು, ಸ್ಥಳದಲ್ಲೇ ಪ್ರಾಣಹೋಗಿದೆ ಎಂದು ಹೇಳಲಾಗಿದೆ.  ಬಾಲಕಿಯ ಸಹಪಾಠಿಗಳು ತಕ್ಷಣವೇ ಆಕೆಯ ನೆರವಿಗೆ ಬಂದರೂ ಪ್ರಯೋಜನವಾಗಿಲ್ಲ. ಮೂಲತಃ ಅಲಿಕುಂಟೆ ಗ್ರಾಮದ ವಿದ್ಯಾರ್ಥಿನಿ ಸಾವು ಇಡೀ ಗ್ರಾಮದಲ್ಲಿ ದುಃಖತಪ್ತ ವಾತಾವರಣ ನಿರ್ಮಾಣವಾಗಿದೆ. ಶಾಲೆಯಲ್ಲೂ ಶೋಕ ಮಡಗಟ್ಟಿತ್ತು. ತೀವ್ರ ಹೃದಯ ಸ್ತಂಭನದಿಂದಾಗಿ ಸಾವು ಸಂಭವಿಸಿದೆ ಎಂದು ಅಭಿಪ್ರಾಯಗಳು ಕೇಳಿಬಂದಿವೆ.

Facebook Comments