ಮೊಬೈಲ್ ಗೇಮ್‍ಗೆ ಮತ್ತೊಬ್ಬ ಯುವಕ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಜು.20- ಮೊಬೈಲ್ ಗೇಮ್‍ಗಳು ಯುವ ಜನಾಂಗಕ್ಕೆ ಅಪಾಯಕಾರಿಯಾಗಿ ಪರಿಣಮಿಸಿ ಸಾವುನೋವು ಸಂಭವಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ದುರ್ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಲೋನಿಖಂಡ್‍ನ ನಿವಾಸಿಯಾದ ದಿವಾಕರ್ ಮಾಲಿ ಆತ್ಮಹತ್ಯೆಗೆ ಕಾಮರ್ಸ್ ವಿದ್ಯಾರ್ಥಿ.

ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬ್ಲ್ಯಾಕ್ ಪ್ಯಾಂಥರ್ ಈಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ, ಈಗ ಆತನಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಎಂದು ಪತ್ರವೊಂದನ್ನು ಬರೆದಿಟ್ಟಿದ್ದ. ಇದು ಆತ ಮೊಬೈಲ್ ಗೇಮ್‍ಗೆ ಅಡಿಕ್ಟ್ ಆಗಿದ್ದ ಎನ್ನುವುದನ್ನು ತಿಳಿಸುತ್ತದೆ.

ಆತನ ಕುಟುಂಬದವರು ಹಾಗೂ ನೆರೆಹೊರೆಯವರ ಪ್ರಕಾರ ಇದು ಬ್ಲ್ಯೂವೇಲ್ ರೀತಿಯದ್ದೇ ಗೇಮ್ ಆಗಿದೆ. ಆತ ಕೆಲವು ಟಾಸ್ಕ್‍ಗಳನ್ನು ಪೂರ್ಣಗೊಳಿಸುವುದಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮೂರು ಹೊತ್ತು ಮೊಬೈಲ್ ಹಿಡಿದುಕೊಂಡಿರುತ್ತಿದ್ದ, ನಾವು ಏನೇ ಹೇಳಿದರೂ ಅದನ್ನು ಬಿಡಿಸಲು ಸಾಧ್ಯವಾಗಿರಲಿಲ್ಲ ಎಂದು ಆತನ ತಾಯಿ ಹೇಳಿದ್ದಾರೆ.

ಚೆನ್ನೈನಲ್ಲಿ 20 ವರ್ಷದ ಯುವಕನೊಬ್ಬ ಬ್ಲ್ಯೂವೇಲ್ ರೀತಿಯ ಆನ್‍ಲೈನ್ ಗೇಮಿನ ಹುಚ್ಚಿಗೆ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಈಗಾಗಲೇ ಟಿಕ್‍ಟಾಕ್, ಬ್ಲ್ಯೂವೇಲ್ ನಂತಹ ಗೇಮಗಳು ಸಾಕಷ್ಟು ಮಂದಿಯ ಪ್ರಾಣ ಕಸಿದಿದೆ. ಆದರೂ ಜನರು ಅದರ ಗೀಳಿಗೆ ಬೀಳುವುದು ಮಾತ್ರ ಕಡಿಮೆಯಾಗಿಲ್ಲ.ಬ್ಲ್ಯೂವೇಲ್ ಮಾದಿರಿಯ ಆಟವೊಂದು ಈಗ ವಿದ್ಯಾರ್ಥಿಯ ಜೀವ ಕಸಿದಿದೆ.

Facebook Comments