ಜಡೆ ಎಳೆದು ಚುಡಾಯಿಸಿದ್ದ ಪುಂಡರು, ಮನನೊಂದು ಬಾಲಕಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ,ಡಿ.21- ಹುಡುಗರು ಜಡೆ ಎಳೆದು ಚುಡಾಯಿಸಿದ್ದರಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರೇನಾ ಕಟ್ಟೆ ಗ್ರಾಮದಲ್ಲಿ ನಡೆದಿದೆ.  ರಾಧಿಕಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕೆಲ ದಿನಗಳ ಹಿಂದೆ ರಾಧಿಕಾ ಕಾಲೇಜಿಗೆ ಹೋಗುವಾಗ ಅದೇ ಗ್ರಾಮದ ಹುಡುಗರ ಗುಂಪು ಜಡೆ ಎಳೆದು ಚುಡಾಯಿ ಸುತ್ತಿದ್ದರು.

ಈ ಬಗ್ಗೆ ಪೋಷಕರಿಗೆ ತಿಳಿಸಿದಾಗ ಗ್ರಾಮದ ಹಿರಿಯರು ಹುಡುಗರಿಗೆ ಬುದ್ದಿ ಹೇಳಿದ್ದರು. ಆದರೆ, ಇದನ್ನೇ ಮುಂದುವರೆಸಿದ ಹುಡುಗರು ನಿನ್ನೆ ಕಾಲೇಜಿಗೆ ಹೋಗಬೇಕಾದರೆ ಮತ್ತೆ ರಾಧಿಕಾಳನ್ನು ಚುಡಾಯಿಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದೀಪ, ಅಭಿ ಎಂಬುವವರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಂಧನಕ್ಕೆ ಆಗ್ರಹ: ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಎಸ್‍ಪಿ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ನಂತರ ವಿದ್ಯಾರ್ಥಿನಿಯ ಶವಸಂಸ್ಕಾರ ನಡೆಸಲಾಯಿತು.
ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments