ವೀಸಾ ರದ್ದು ವಾಪಸ್ ಪಡೆಯುವಂತೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.10- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ವಿದ್ಯಾರ್ಥಿಗಳ ಎಫ್1 ಅಂಡ್ ಎಂ1 ವೀಸಾವನ್ನು ರದ್ದುಪಡಿಸುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಜನ ಪ್ರತಿನಿಧಿಗಳ ನಿಯೋಗ ಆಗ್ರಹಿಸಿದೆ.

ಭಾರತೀಯ ಮೂಲದ ಕಮಲ್ ಹ್ಯಾರೀಸ್ ಸೇರಿದಂತೆ 136 ಮಂದಿ ಕಾಂಗ್ರೆಸ್‍ಮನ್ಸ್, 30 ಮಂದಿ ಸೆನೆಟರ್‍ಗಳು ಪ್ರತಿಭಟನೆ ನಡೆಸಿದ್ದು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿಷಯದಲ್ಲಿ ಟ್ರಂಪ್ ಸರ್ಕಾರ ಜು.6ರಂದು ಹೊರಡಿಸಿರುವ ಕ್ರೂರ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಆದೇಶದಿಂದ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆನ್‍ಲೈನ್‍ನಲ್ಲೇ ಶಿಕ್ಷಣ ಪಡೆಯಬೇಕೆಂಬುದು ಅವಾಸ್ತಿವಿಕ ವಾದ. ಇದು ವಿದ್ಯಾರ್ಥಿಗಳ ಹಕ್ಕುಗಳನ್ನು ಕಸಿದಂತಾಗುತ್ತದೆ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments