ಮೀಸೆ ಮಾವಂದಿರು, ಗಡ್ಡಧಾರಿಗಳ ವಿಶಿಷ್ಟ ಫ್ಯಾಷನ್ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

ds

ಇಂಗ್ಲೆಂಡ್ ಅನೇಕ ವಿಶೇಷ- ವಿಶಿಷ್ಟ ಕ್ರೀಡೆ-ಸ್ಪರ್ಧೆಗಳಿಂದ ಲೋಕವಿಖ್ಯಾತಿ ಪಡೆದಿದೆ ಎಂಬುದು ನೀವು ಬಲ್ಲಿರಿ.. ಅಲ್ಲಿ ಪ್ರತಿವರ್ಷ ನಡೆಯುವ ಬ್ರಿಟಿಷ್ ಗಡ್ಡ ಮತ್ತು ಮೀಸೆ ಚಾಂಪಿಯನ್‍ಶಿಪ್ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಈ ಮೀಸೆ ಮಾವಂದಿರು ಹಾಗೂ ಗಡ್ಡಧಾರಿಗಳ ಸ್ಟೈಲ್‍ನನ್ನು ನಾವೀಗ ನೋಡೋಣ.
ಇಂಗ್ಲೆಂಡ್‍ನ ಬ್ಲಾಕ್‍ಪೂಲ್‍ನಲ್ಲಿ ನಡೆದ ನಾಲ್ಕನೇ ಬ್ರಿಟಿಷ್ ಗಡ್ಡ ಮತ್ತು ಮೀಸೆ ಚಾಂಪಿಯನ್‍ಶಿಪ್‍ನಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಯಾಂಡ್‍ಗ್ರೌನ್ ಹೆಸರಿನ ಬಿಯಡ್ರ್ಸ್‍ಮೆನ್ ಬ್ಲಾಕ್‍ಪೂಲ್ ಬಿಯರ್ಡ್ ಅಂಡ್ ಮಸ್ಟಾಷ್ ಕ್ಲಬ್ ಸಂಸ್ಥಾಪಕ ಬ್ರಿಯಾನ್ ಇವಾ ಪ್ರತಿವರ್ಷ ಈ ವಿನೂತನ ಸ್ಪರ್ಧೆ ಆಯೋಜಿಸುತ್ತಾರೆ.

ಒಟ್ಟು 21 ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಮೀಸೆ ಮಾವಂದಿರು ಹಾಗೂ ವಿಶಿಷ್ಟ ಗಡ್ಡಧಾರಿಗಳು ತನ್ನ ಸ್ಟೈಲ್ ಮತ್ತು ಕ್ರಿಯೇಟಿವಿಟಿ ಪ್ರದರ್ಶಿಸಿದರು. ಅಮಿಷ್/ವೇಲರ್ ಬಿಯರ್ಡ್, ಸೈಡ್‍ಬನ್ರ್ಸ್/ ಚಾಪ್ಸ್ ವಿಭಾಗಗಳಲ್ಲಿ ನಡೆದ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು.  ಈ ವರ್ಷದ ಸ್ಫರ್ಧೆಯಲ್ಲಿ ಯುನೈಟೆಡ್ ಕಿಂಗ್‍ಡಂ, ನಾರ್ವೆ, ಅಮೆರಿಕ ಸೇರಿದಂತೆ 11 ದೇಶಗಳ ಮೀಸೆ ಮಾವಂದಿರು ಮತ್ತು ಗಡ್ಡಧಾರಿಗಳು ಭಾಗವಹಿಸಿದ್ದರು. ಹಾಲಿ ವಿಶ್ವ ಸಹಜ ಸೈಡ್‍ಬರ್ನ್ ಚಾಂಪಿಯನ್ ಮೈಕೆಲ್ ವಲಾಜ್ ಸಹ ಪಾಲ್ಗೊಂಡಿದ್ದರು.  ಈ ಸ್ಪರ್ಧೆ ಜನರಿಗೆ ಮನರಂಜನೆ ನೀಡುವ ಜೊತೆಗೆ ವಿಭಿನ್ನ ಪರಿಕಲ್ಪನೆಯಲ್ಲಿ ಗಡ್ಡ ಮತ್ತು ಮೀಸೆ ಯನ್ನು ಹೇಗೆಲ್ಲಾ ವಿನ್ಯಾಸಗೊಳಿ ಸಬಹುದು ಎಂಬುದಕ್ಕೆ ಸಾಕ್ಷಿಯಾಗಿತ್ತು

ds-1

Facebook Comments

Sri Raghav

Admin