ನೌಕಾದಳಕ್ಕೆ ಐಎನ್‍ಎಸ್ ವೇಲಾ ಜಲಾಂತರ್ಗಾಮಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ನ.25- ಭಾರತೀಯ ನೌಕಾದಳವು ಇಂದು ಇಲ್ಲಿ ಜಲಾಂತರ್ಗಾಮಿ ಐಎನ್‍ಎಸ್ ವೇಲಾವನ್ನು ಸೇರ್ಪಡೆಗೊಳಿಸಿಕೊಂಡಿದ್ದು, ದೇಶದ ನೌಕಾದಳದ ಹಿರಿಮೆಗೆ ಮತ್ತಷ್ಟು ಮೆರುಗು ನೀಡಿದೆ.

ಇದು ಕಲ್ವರಿ -ವರ್ಗದ ಜಲಾಂತರ್ಗಾಮಿ ಯೋಜನೆ 75ರ ಅಡಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಆರು ಜಲಾಂತರ್ಗಾಮಿಗಳ ಪೈಕಿ ನಾಲ್ಕನೇಯದಾಗಿದೆ.ನೌಕಾದಳ ಮುಖ್ಯಸ್ತ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಈ ಜಲಾಂತರ್ಗಾಮಿಯನ್ನು ಚಾಲನೆಗೊಳಿಸಲಾಯಿತು.

ಕಳೆದ ಒಂದು ವಾರಕ್ಕೂ ಕಡಿಮೆ ಅವಯಲ್ಲಿ ಇದು ಭಾರತೀಯ ನೌಕಾದಳಕ್ಕೆ 2ನೇ ಬಾರಿ ಜಲಾಂತರ್ಗಾಮಿಯ ಸೇರ್ಪಡೆಯಾಗಿದೆ.ನವೆಂಬರ್ 21ರಂದು ನೌಕಾದಳಕ್ಕೆ ಐಎನ್‍ಎಸ್ ವಿಶಾಖಪಟ್ಟಣಂ ಸಮರ ನೌಕೆ ಸೇರಿತ್ತು.

Facebook Comments