ಸಬ್‍ಅರ್ಬನ್ ರೈಲು ಜಾಲದಲ್ಲಿ ಪ್ರತ್ಯೇಕ ದುರಂತ, 16 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಜು.19 (ಪಿಟಿಐ)- ಮುಂಬೈನ ಸಬ್‍ಅರ್ಬನ್ ರೈಲು ಜಾಲದಲ್ಲಿ ನಿನ್ನೆ ಒಂದೇ ದಿನ ಸಂಭವಿಸಿದ ಪ್ರತ್ಯೇಕ ದುರ್ಘಟನೆಗಳಲ್ಲಿ ಓರ್ವ ಮಹಿಳೆ ಸೇರಿದಂತೆ 16 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ದೇಶದ ವಾಣಿಜ್ಯ ನಗರಿ ಮುಂಬೈನ ಜೀವನಾಡಿ ಎಂದೇ ಕರೆಯಲ್ಪಡುವ ಸಬ್‍ಅರ್ಬನ್ ರೈಲ್ ನೆಟ್‍ವರ್ಕ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಒಂದೇ ದಿನ ಸಂಭವಿಸಿದ ಅತ್ಯಧಿಕ ಸಾವಿನ ಪ್ರಕರಣ ಇದಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ 13 ಪ್ರಯಾಣಿಕರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರಾಂತ್ಯದ ಭಾಗವಾಗಿರುವ ಥಾಣೆ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಏಳು ಮಂದಿ, ಥಾಣೆ ಮುಖ್ಯ ರೈಲು ನಿಲ್ದಾಣದಲ್ಲಿ ಮೂವರು, ಡೊಂಬಿವಿಲಿ ಮತ್ತು ಕಲ್ಯಾಣ್‍ನಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.

ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಇನ್ನಿಬ್ಬರು ಅಸುನೀಗಿದ್ದಾರೆ.

Facebook Comments