ಮುಂಬೈನಲ್ಲಿ ಸಬ್‍ ಅರ್ಬನ್ ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.15- ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಜನರ ಜೀವನಾಡಿ ಸಬ್ ಅರಬನ್ ರೈಲುಗಳ ಸಂಚಾರ ಆರಂಭಿಸಲಾಗಿದೆ. ಕಳೆದ ಎರಡೂವರೆ ತಿಂಗಳಿನಿಂದ ಸ್ತಬ್ಧಗೊಂಡಿದ್ದ ರೈಲು ಸೇವೆ ಪುನರಾರಂಭಗೊಂಡಿದ್ದು, ಜನರು ಕೂಡ ಸ್ಪಂಧಿಸುತ್ತಿದ್ದಾರೆ.

ಕೊರೋನಾ ಮಹಾಮಾರಿ ವ್ಯಾಪಕವಾಗಿ ರಾಜ್ಯದಲ್ಲಿ ಹರಡುತ್ತಿರುವ ನಡುವೆಯೂ ವಾಣಿಜ್ಯ ಚಟುವಟಿಕೆಗಳನ್ನು ಮತ್ತೆ ಸರಿ ಹಾದಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಿದೆ.

ಕಚೇರಿ ಮತ್ತು ವ್ಯಾಪಾರ ವಹಿವಾಟುಗಳು ಮುಂಬೈನಲ್ಲಿ ನಿಧಾನವಾಗಿ ಆರಂಭಗೊಳ್ಳುತ್ತಿದ್ದು, ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದ ಜನರು ಧೈರ್ಯ ಮಾಡಿ ಹೊರ ಬರುತ್ತಿದ್ದಾರೆ.

Facebook Comments