‘ಕಬ್ಜ’ ಚಿತ್ರದಲ್ಲಿ ಕಿಚ್ಚ ಸುದೀಪ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ. 14- ರಿಯಲ್‍ಸ್ಟಾರ್ ಉಪೇಂದ್ರ ನಟಿಸುತ್ತಿರುವ ಕಬ್ಜ ಚಿತ್ರದಲ್ಲಿ ನಟಿಸುತ್ತಿರುವ ಸ್ಟಾರ್ ನಟನ ಬಗ್ಗೆ ಚಿತ್ರ ನಿರ್ದೇಶಕ ಆರ್.ಚಂದ್ರು ಅವರು ಮಾಹಿತಿ ನೀಡುವ ಮೂಲಕ ಕಳೆದೆರಡು ದಿನಗಳಿಂದ ಮೂಡಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. 70-80ರ ದಶಕದ ಭೂಗತ ಲೋಕದ ನಂಟಿರುವ ಕಥೆಯನ್ನು ತೆರೆಗೆ ತರುತ್ತಿದ್ದು ಈಗಾಗಲೇ ಈ ಚಿತ್ರದ ಪೋಸ್ಟರ್‍ಗಳು ಸಾಕಷ್ಟು ಸೌಂಡ್ ಮಾಡಿದೆ. ಮಕರ ಸಂಕ್ರಾಂತಿಯ ಶುಭಸಂದರ್ಭದಲ್ಲೇ ಈ ಚಿತ್ರದ ನಟಿಸುತ್ತಿರುವ ಮತ್ತೊಬ್ಬ ಸ್ಟಾರ್ ನಟನ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಇಂದು ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್‍ನಲ್ಲಿ ಕಿಚ್ಚ ಸುದೀಪ್ ಅವರು ಭಾರ್ಗವ್‍ಬಕ್ಷಿ ಪಾತ್ರದಲ್ಲಿ ನಟಿಸುತ್ತಿದ್ದು ಉರಿ ಮೀಸೆಯೊಂದಿಗೆ ತೀಕ್ಷ್ಣ ಕಣ್ಣೋಟವಿರುವ ಅವರ ಲುಕ್ ಈಗಾಗಲೇ ಕಿಚ್ಚನ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿಸಿದ್ದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿಕೊಂಡಿದ್ದಾರೆ. ಕಬ್ಜ ಚಿತ್ರದಲ್ಲಿ ಉಪೇಂದ್ರ ರಿಗಿರುವಷ್ಟೇ ಪವರ್‍ಫುಲ್ ಪಾತ್ರ ಕಿಚ್ಚ ಸುದೀಪ್ ಗೂ ಇದ್ದು ಅವರು ಭಾರ್ಗವ್ ಬಕ್ಷಿ ಎಂಬ ಅಂಡರ್‍ವಲ್ರ್ಡ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಕಬ್ಜ ಚಿತ್ರಕ್ಕೆ ರಾಜಮೌಳಿಯ ತಂದೆ ವಿಜಯವೇಂದ್ರ ಪ್ರಸಾದ್ ಅವರು ಕಥೆ ಬರೆದಿರುವುದರಿಂದಲೂ ಚಿತ್ರದ ಬಗ್ಗೆ ಕುತೂಹಲ ಮೂಡಿದೆ, ಈ ಚಿತ್ರವು ಎರಡು ಭಾಗಗಳಲ್ಲಿ ಬರುತ್ತಿದ್ದು ಸುದೀಪ್ ಅವರು ಎರಡು ಭಾಗಗಳಲ್ಲೂ ಇರುತ್ತಾರೋ ಅಥವಾ ಮೊದಲ ಭಾಗದಲ್ಲಿ ಮಾತ್ರ ಬರುತ್ತಾರೋ ಎಂಬ ಕುತೂಹಲವನ್ನು ನಿರ್ದೇಶಕ ಆರ್.ಚಂದ್ರು ಮೂಡಿಸಿದ್ದಾರೆ.
ಚಂದ್ರು ಕೂಡ ನಮ್ಮ ಕಬ್ಜ ಚಿತ್ರಕ್ಕೆ ಕಿಚ್ಚ ಸುದೀಪ್‍ಗೆ ಸ್ವಾಗತ ಎಂದು ಹೇಳುವ ಮೂಲಕ ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.

ಕಿಚ್ಚ ಸುದೀಪ್ ಅವರು ಕೋಟಿಗೊಬ್ಬ 3, ಫ್ಯಾಂಟಮ್, ಅಶ್ವತ್ಥಾಮ ಚಿತ್ರಗಳೊಂದಿಗೆ ಬಿಗ್‍ಬಾಸ್ ಶೋ ಅನ್ನು ನಿರೂಪಿಸಲು ಮುಂದಾಗಿರುವಾಗಲೇ ಉಪೇಂದ್ರರವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಮುಂದಾಗಿರುವುದರಿಂದ ಉಪ್ಪಿ ಹಾಗೂ ಸುದೀಪ್ ಅಭಿಮಾನಿ ಗಳಲ್ಲಿ ಕುತೂಹಲ ಹೆಚ್ಚಿದೆ. ಈ ಹಿಂದೆ ರಿಯಲ್‍ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರು ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಾಗಿ ನಟಿಸಿ ಅಭಿಮಾನಿಗಳ ಮನ ರಂಜಿಸಿದ್ದರು.

Facebook Comments