ಡೆನ್ವರ್‌ಗೆ ಸುದೀಪ್ ಅಂಬಾಸಿಡರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಪುರುಷರ ಪ್ರೀಮಿಯಂ ಫ್ರಾಗ್ರಾನ್ಸ್ ಬ್ರ್ಯಾಂಡ್ ಆಗಿರುವ ಡೆನ್ವೆರ್‍ಗೆ ನಟ ಕಿಚ್ಚ ಸುದೀಪ್ ಅವರು ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಡಿಯೋಡ್ರೆಂಟ್ ಮತ್ತು ಮೆನ್ ಗ್ರೂಮಿಂಗ್ ವಿಭಾಗದಲ್ಲಿ ಕರ್ನಾಟಕದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಆಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಿಷ್ಠ ಗೊಳಿಸಿಕೊಳ್ಳುವ ಉದ್ದೇಶದಿಂದ ಸುದೀಪ್ ಅವರನ್ನೊಳಗೊಂಡ ಟಿವಿಸಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ವೆನೆಸಾ ಕೇರ್‍ನ ಡೆನ್ವೆರ್ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದು, ಪುರುಷರನ್ನು ಅಂದಗೊಳಿಸುವ ವಿಭಾಗದಲ್ಲಿ ವ್ಯಾಪಕವಾದ ಸುಗಂಧ ದ್ರವ್ಯಗಳು ಮತ್ತು ಡಿಯೋಡ್ರೆಂಟ್‍ಗಳನ್ನು ನೀಡುತ್ತದೆ. ಸುದೀಪ್ ಅವರೊಂದಿಗಿನ ಸಹಭಾಗಿತ್ವವನ್ನು ವಹಿಸುವ ಮೂಲಕ ಇಂದಿನ ಸಹಸ್ರಮಾನದ ಪೀಳಿಗೆಯ ಆಕಷರ್ಣೆ ಮತ್ತು ಶೈಲಿಯೊಂದಿಗೆ ಸಂಪರ್ಕ ಸಾಧಿಸುವ ಬ್ರ್ಯಾಂಡ್ ಆಗಲು ಮಾತ್ರವಲ್ಲದೇ, ಈ ಜÁಗದಲ್ಲಿ ನಾಯಕ ನಾಗಿ ತಮ್ಮ ನಿಲುವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಡೆನ್ವರ್‍ನ ಮಾರುಕಟ್ಟೆ ಮಾರಾಟ ವಿಭಾಗದ ನಿರ್ದೇಶಕ ಸೌರಭ್ ಗುಪ್ತಾ ಮಾತನಾಡಿ, ನಮ್ಮ ಬ್ರ್ಯಾಂಡ್ ಅಂಬಾಸಿಡರ್‍ಗಳಾದ ಶಾರುಖ್‍ಖಾನ್ ಮತ್ತು ಮಹೇಶ್‍ಬಾಬು ಅವರಂಥಹ ಮೇರು ನಟರ ಜೊತೆಗಿನ ಸಹಯೋಗದಿಂದ ವಿವಿಧ ಪ್ರದೇಶಗಳಲ್ಲಿ ನಮ್ಮ ಮಾರುಕಟ್ಟೆ ಯನ್ನು ವಿಸ್ತಾರ ಮಾಡಿಕೊಳ್ಳುವ ಅದೃಷ್ಟ ಲಭಿಸಿದೆ. ಇದೀಗ ಕರ್ನಾಟಕ ದಲ್ಲಿಯೂ ನಮ್ಮ ಹೆಜ್ಜೆ ಗುರುತುಗಳನ್ನು ಅಚ್ಚಳಿಯದಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಸುದೀಪ್ ಮಾತನಾಡಿ, ಆರಂಭದಿಂದಲೂ ಡೆನ್ವರ್ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸ್ಥಾಪಿತವಾದ ಪ್ಲೇಯರ್ ಆಗಿ ಹೊರಹೊಮ್ಮುತ್ತಾ ಬಂದಿದೆ. ಇದರ ಜತೆಗೆ ಅನನ್ಯವಾಗಿರಲು ಸತತ ಪ್ರಯತ್ನಗಳನ್ನೂ ಮಾಡುತ್ತಿದೆ. ವಿಶೇಷÀವಾಗಿ ಯುವ ಗ್ರಾಹಕರನ್ನು ತಲುಪಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಸಾಧಿಸುತ್ತಿದೆ. ಈ ರೀತಿಯ ಪ್ರಮುಖ ಬ್ರ್ಯಾಂಡ್‍ನೊಂದಿಗೆ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ ಎಂದರು.

Facebook Comments