ಸಿದ್ಧಗಂಗಾ ಮಠಕ್ಕೆ ನಟ ಸುದೀಪ್ ಮತ್ತು ಇಂದ್ರಜಿತ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.1- ನಾಳೆ ನನ್ನ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಿದ್ಧಲಿಂಗಸ್ವಾಮಿ ಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ನಟ ಸುದೀಪ್ ತಿಳಿಸಿದರು.

ನಿನ್ನೆಯಷ್ಟೇ ಇಂದ್ರಜಿತ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ಮಾಡಿ ಸ್ವಾಮಿಗಳ ಆಶೀರ್ವಾದ ಪಡೆದು ಬರೋಣ ಎಂದು ಹೇಳಿದ್ದರು. ಅದರ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದೇನೆ. ಈ ಜÁಗ ಐತಿಹಾಸಿಕ ಸ್ಥಳವಾಗಿದೆ ಎಂದರು.

ಕೋವಿಡ್ ಇರುವ ಹಿನ್ನೆಲೆಯಲ್ಲಿ ಯಾರೂ ಅಭಿಮಾನಿಗಳು ಮನೆಯ ಹತ್ತಿರ ಬರೋದು ಬೇಡ. ದಯವಿಟ್ಟು ನಮಗೆ ಸಹಕರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

Facebook Comments