ಹಾಸ್ಯನಟ ರಾಕ್​ಲೈನ್​ ಸುಧಾಕರ್​ ನಿಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ. 23- ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ಹಾಸ್ಯನಟ ರಾಕ್‍ಲೈನ್ ಸುಧಾಕರ್ ಇಂದು ಚಿತ್ರೀಕರಣದ ಸೆಟ್‍ನಲ್ಲೇ ಹೃದಯಾಘಾತವಾಗಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ನಿರ್ದೇಶಕ ಕೆ.ಎಂ.ಶಶಿಧರ್ ನಿರ್ದೇಶನದ ಸುಗರ್‍ಲೈಸ್ ಚಿತ್ರದ ಶೂಟಿಂಗ್ ಬನ್ನೇರುಘಟ್ಟ ರಸ್ತೆಯಲ್ಲಿ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದ ಸುಧಾಕರ್ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಅವರು ಕೊರೊನಾ ಮಾರಿಯನ್ನು ಗೆದ್ದು ಬಂದಿದ್ದರು.

ನಿರ್ದೇಶಕ ಸುನಿ ತಮ್ಮ ಟ್ವಿಟ್ಟರ್ ಖಾತೆ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದು 2020 ಕನ್ನಡ ಚಿತ್ರರಂಗಕ್ಕೆ ಕರಾಳ ವರ್ಷವೇ ಸರಿ. ಈ ವರ್ಷ ಕನ್ನಡ ಚಿತ್ರರಂಗ ಅನೇಕ ಕಲಾವಿದರನ್ನು ಕಳೆದುಕೊಂಡು ಈಗ ನಟ ರಾಕ್‍ಲೈನ್ ಸುಧಾಕರ್ ಅಗಲಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಉತ್ತಮ ಹಾಸ್ಯನಟರಾಗಿದ್ದ ರಾಕ್‍ಲೈನ್ ಸುಧಾಕರ್ ಪಂಚತಂತ್ರ, ಟೋಪಿವಾಲಾ, ಅಜಿತ್, ಉಡುಂಬಾ, ಚಮಕ್, ಪಟಾಕಿ, ಜೂಮ್ , ಕೆಮಿಸ್ಟ್ರಿ ಆಫ್ ಕರಿಯಪ್ಪ, ಗಜಕೇಸರಿ ಸೇರಿದಂತೆ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು , ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ರಾಕ್‍ಲೈನ್ ಸುಧಾಕರ್‍ರ ನಿಧನಕ್ಕೆ ಕರ್ನಾಟಕ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

Facebook Comments