ಬ್ರಿಟನ್‍ನಿಂದ ಆಗಮಿಸಿದ ಇನ್ನೂ 75 ಪ್ರಯಾಣಿಕರು ಪತ್ತೆಯಾಗಿಲ್ಲ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.1- ಬ್ರಿಟನ್‍ನಿಂದ ಆಗಮಿಸಿದವರಲ್ಲಿ ಇನ್ನು 75 ಪ್ರಯಾಣಿಕರು ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 70ಹಾಗೂ ಇತರೆ ಜಿಲ್ಲೆಗಳಿಗೆ ಸಂಬಂಧಿಸಿದ 5 ಜನರು ಸೇರಿದ್ದಾರೆ. ಪತ್ತೆಯಾಗದ ಇವರನ್ನು ಸಂಜೆ ವೇಳೆಗೆ ಪತ್ತೆ ಹಚ್ಚುವುದಾಗಿ ಗೃಹ ಇಲಾಖೆ ಭರವಸೆ ನೀಡಿದೆ ಎಂದರು.

ಯುಕೆಯಿಂದ ಬಂದ 33 ಪ್ರಯಾಣಿಕರ ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇವರ ಸಂಪರ್ಕದಲ್ಲಿದ್ದ ಇತರೆ ಐದು ಜನರಿಗೂ ಪಾಸಿಟಿವ್ ಬಂದಿದ್ದು, ಒಟ್ಟು 38 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಏಳು ಮಂದಿಯಲ್ಲಿ ರೂಪಾಂತರಗೊಂಡ ವೈರಾಣು ದೃಢಪಟ್ಟಿದೆ ಎಂದು ಹೇಳಿದರು.

ಬ್ರಿಟನ್‍ನಿಂದ ನ.25ರಿಂದ ನಿನ್ನೆಯವರೆಗೆ 5,068 ಜನರು ಬಂದಿದ್ದರು. ಅವರಲ್ಲಿ 4238 ಜನರು ಡಿಸೆಂಬರ್ 9ರಿಂದ ಬಂದಿದ್ದಾರೆ. ಈ ಪೈಕಿ 810 ಹೊರರಾಜ್ಯದವರಾಗಿದ್ದಾರೆ. ಹೊರರಾಜ್ಯದವರ ಪ್ರಯಾಣಿಕರ ಎಲ್ಲ ಮಾಹಿತಿಯನ್ನು ಆಯಾ ರಾಜ್ಯದವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.

Facebook Comments