“ಎರಡೂ ಖಾತೆಗಳನ್ನು ಒಬ್ಬರಿಗೇ ಕೊಡಲಿ” : ಸಚಿವ ಸುಧಾಕರ್ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.22- ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಒಂದಕ್ಕೊಂದು ಸಂಬಂಧ ಇರುವುದರಿಂದ ಯಾರಿಗೆ ಬೇಕಾದರೂ ಖಾತೆ ಕೊಡಲಿ. ಎರಡೂ ಖಾತೆಗಳನ್ನು ಒಬ್ಬರಿಗೇ ಕೊಡಲಿ ಎಂಬುದು ನನ್ನ ಮನವಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.  ವೈದ್ಯಕೀಯ ಶಿಕ್ಷಣ ಒಂದು ವಿಶೇಷ ಸಬ್ಜೆಕ್ಟ್. ಮೆಡಿಕಲ್ ಎಜುಕೇಶನ್, ಆರೋಗ್ಯ ಇಲಾಖೆ ಒಂದಕ್ಕೊಂದು ಪೂರಕವಾದದು. ಖಾತೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಒಬ್ಬರಿಗೇ ಕೊಡುವುದು ಒಳಿತು ಎಂದರು.

ಖಾತೆ ಬೇರೆ ಬೇರೆಯಾದರೆ ಸಮಸ್ಯೆ ಎದುರಾಗುತ್ತದೆ. ವ್ಯಾಕ್ಸಿನ್ ನೀಡುತ್ತಿರುವ ಹೊತ್ತಲ್ಲಿ ಈ ಬದಲಾವಣೆ ಸರಿಯಲ್ಲ. ನಾವು ರಾಜಕೀಯ ಸೂಸೈಡ್ ಪರಿಸ್ಥಿಯಲ್ಲಿ ಗೆದ್ದು ಬಂದಿದ್ದೇವೆ.ಅದರಲ್ಲೂ ಎಂಟಿಬಿ ನಾಗರಾಜ್ ತಮ್ಮ ಬಳಿ ಇದ್ದ ವಸತಿ ಖಾತೆ ಬಿಟ್ಟು ಬಂದಿದ್ದಾರೆ.  ಈ ನಿರ್ಧಾರ ಲಸಿಕೆ ಹಂಚಿಕೆಗೆ ಗೊಂದಲ ಉಂಟಾಗಬಾರದು ಅನ್ನೋದಷ್ಟೇ ನನ್ನ ಉದ್ದೇಶ. ಗೋಪಾಲಯ್ಯ, ನಾರಾಯಣಗೌಡ್ರು, ಎಂಟಿಬಿಗೆ ಅನ್ಯಾಯ ಆಗಿದೆ. ಗೋಪಾಲಯ್ಯನವರು ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎಂಟಿಬಿ ಅವರ ರಕ್ಷಣೆ ನಮ್ಮ ಕರ್ತವ್ಯ ಎಂದು ಹೇಳಿದರು.

ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಮಗೆ ಪಾರ್ಟಿ ಡಿಸಿಪ್ಲೀನ್ ಅತ್ಯಂತ ಮುಖ್ಯವಾದದು. ವೈಯಕ್ತಿಕ ಆಸೆ ಆಕಾಂಕ್ಷೆಯಲ್ಲ. ಅಶೋಕ್ ಜೊತೆ ನಾನು ಮಾತಾಡಿಲ್ಲ, ಬೊಮ್ಮಾಯಿ ಜೊತೆಗೆ ಮಾತನಾಡಿದ್ದೀನಿ.  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶೇಕಡಾ ಮೂರು ಓಟ್ ಪಡೆದಿಲ್ಲ. ಅಂತಾದ್ರಲ್ಲಿ ನಾನು ಎಷ್ಟು ರಿಸ್ಕ್ ತೆಗೆದುಕೊಂಡು ಬಂದಿದ್ದೇನೆ ಎಂಬುದು ನನಗೆ ಗೊತ್ತಿದೆ.

ಬೇರೆ ಬೇರೆ ಕಾರ್ಯ ಇದ್ದುದರಿಂದ ಕ್ಯಾಬಿನೇಟ್‍ಗೆ ಹೋಗಿಲ್ಲ. ಕ್ಯಾಬಿನೇಟ್‍ಗೆ ಹೋಗದಿರುವ ಬಗ್ಗೆ ಪೂರ್ವ ನಿಗದಿ ಏನೂ ಇರಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಎರಡು ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂದು ಸಿಎಂಗೆ ಮನವಿ ಮಾಡುತ್ತೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಮುಖ್ಯಮಂತ್ರಿ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

# ಹುಣಸೋಡು ಘಟನೆ ದುರದೃಷ್ಟಕರ:
ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಘಟನೆ ದುರದೃಷ್ಟಕರ. ಘಟನೆಯನ್ನು ಗಣಿ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣವಾದವರಿಗೆ ಸೂಕ್ತವಾದ ಶಿಕ್ಷೆಗೆಯಾಗಬೇಕು ಎಂದು ಇದೇ ವೇಳೆ ಸುಧಾಕರ್ ತಿಳಿಸಿದರು.

ಕೆಲ ಜಿಲ್ಲೆಗಳಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡೊದಿದೆ. ಜೊತೆಗೆ ಹೆಚ್ಚು ಶೇಖರಣೆ ಮಾಡಲಾಗ್ತಾಯಿದೆ. ನಿಯಮ ಗಾಳಿಗೆ ತೋರಿ ಕ್ರಷರ್ ಕೆಲಸಗಳು ನಡೆಯುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ನನ್ನ ಜಿಲ್ಲೆಯಲ್ಲೂ ಕೂಡ ಕ್ರಷರ್ ಕೆಲಸ ನಡೆಯುತ್ತಿದೆ. ಅನುಮತಿ ಕೊಡವವರು ಆಗಾಗ್ಗೆ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು. .

Facebook Comments