ಎಲ್ಲವೂ ಪಾರದರ್ಶನಕವಾಗಿ ನಡೆದಿದೆ: ಸಿದ್ದುಗೆ ಸಚಿವ ಸುಧಾಕರ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ರಾಜ್ಯದಲ್ಲಿ ಕೊರೊನಾ ಪೀಡಿತ ಸಂಖ್ಯೆ ಹೆಚ್ಚುತ್ತಿದೆ. ದಿನಕ್ಕೊಂದು ಸಮಸ್ಯೆಗಳು ಎದುರಾಗುತ್ತಿದೆ. ಇದರ ನಡುವೆ ನಮ್ಮ ಸರ್ಕಾರ ಹಗಲಿರುಳು ಎನ್ನದೆ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದೆ. ಹೀಗಿರುವಾಗ ವಿಪಕ್ಷ ನಾಯಕ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿರುವುದು ವೈಯಕ್ತಿಕವಾಗಿ ನೋವುಂಟು ಮಾಡಿದೆ.

ಖರ್ಚಾಗಾಗಿರುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ.  ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದವರು. ಈ ರೀತಿ ಮಾತನಾಡಿದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಕಳೆದ ನಾಲ್ಕೂವರೆ ತಿಂಗಳಿನಿಂದ ಕೋವಿಡ್ ಉಪಕರಣಗಳ ಖರೀದಿಯನ್ನು ಪಾರದರ್ಶಕವಾಗಿ ನಡೆಸಲಾಗಿದೆ.

ಇತ್ತೀಚೆಗೆ ಪೆÇಲೀಸರು, ಆರೋಗ್ಯ ಸಿಬ್ಬಂದಿಗಳು, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕೊರೊನಾ ಸೋಂಕು ತಟ್ಟುತ್ತಿದೆ. ಅವರ ಕುಟುಂಬ ಸದಸ್ಯರು, ಸಿಬ್ಬಂದಿಗಳಿಗೂ ಕೂಡ ಭೀತಿ ಹುಟ್ಟಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಈ ರೀತಿ ಮಾತನಾಡುವುದು ಸರಿಯಲ್ಲ.

ಅವರಿಗೆ ಅನುಮಾನವಿದ್ದರೆ ಸಚಿವರಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಗಾಗಲಿ ಕೇಳಬಹುದಿತ್ತು. ಆದರೆ ಏಕಾಏಕ ಆರೋಪ ಮಾಡುವುದು ಸರಿ ಎಂದು ಪ್ರಶ್ನಿಸಿದರು.  ನಾವು ಅರ್ಧ ಮನಸ್ಸು , ಅರ್ಧ ಹೃದಯ ಇಟ್ಟುಕೊಂಡು ಬಂದಿಲ್ಲ. ಜನಪರ ಕೆಲಸ ಮಾಡಲು ಬಂದಿದ್ದೇವೆ.ಸರ್ಕಾರ ಯಾವುದನ್ನೂ ಮುಚ್ಚಿಡುವಂತಹ ಪ್ರಮೇಯವೇ ಇಲ್ಲ.ಯಾವ ದಾಖಲೆಗಳೂ ಎಲ್ಲೂ ಹೋಗಲ. ಬೇಕಿದ್ದರೆ ತನಿಖೆಯಾಗಲಿ ಎಂದು ಕಿಡಿಕಾರಿದರು.

ಈ ವೇಳೆ ಆರೋಗ್ಯ ಇಲಾಖೆಯಲ್ಲಿ ಪಿಪಿಇ ಕಿಟ್‍ಗಳ ಖರೀದಿಯಲ್ಲೂ ಆರೋಪಗಳು ಕೇಳಿಬರುತ್ತಿದೆ ಎಂಬ ಪ್ರಶ್ನೆಗ ಉತ್ತರಿಸಿದ ಸುಧಾಕರ್, ಯಾರೇ ಆಗಲಿ ಇಂತಹ ಸಂದರ್ಭದಲ್ಲ ಲಂಚಹೊಡೆದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನರ್ಹರು.  ಇಡೀ ದೇಶದಲ್ಲಿ 30 ರಾಜ್ಯಗಳು,ಕೇಂದ್ರ ಸರ್ಕಾರ ಉಪಖರಣಗಳನ್ನು ಖರೀದಿ ಮಾಡಿದೆ. ದುಬಾರಿ ಹಣದಲ್ಲಿ ಖರೀದಿಸಲಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಉನ್ನತ ಮಟ್ಟದ ಅಧಿಕಾರಿಗಳೇ ಪಾರದರ್ಶಕವಾಗಿ ಎಲ್ಲ ಪ್ರಕತಿಕ್ರಿಯೆಗಳನ್ನು ನಡೆಸಿದ್ದಾರೆ. ನಾವುದೇ ತನಿಖೆಯಾಗಲಿ ಎದುರಿಸಲುಸಿದ್ದ ಎಂದಿದ್ದಾರೆ.

ಇದೇ ವೇಳೇ ಎಸ್ಸೆಸ್ಸೆಲ್ಸಿ ಪರೀಕ್ಷೆವೇಳೆ ವಿದ್ಯಾಥಿರ್ಘಗಳ ಹಿತ ಕಾಯಲು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆರು, ವೈದ್ಯ ಸಿಂಬಂದಿಯಗಳು ಶ್ರಮಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Facebook Comments