ನ್ಯಾಯದೇವತೆಯಲ್ಲಿ ನಮಗೆ ನಂಬಿಕೆಯಿದೆ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.29- ಕಷ್ಟದಲ್ಲಿದ್ದಾಗ ಸ್ನೇಹಿತರನ್ನು ಭೇಟಿಯಾಗಿ ಧೈರ್ಯ ತುಂಬುವುದು ಸರ್ವೇ ಸಾಮಾನ್ಯ. ನ್ಯಾಯದೇವತೆಯಲ್ಲಿ ನಮಗೆ ನಂಬಿಕೆಯಿದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನ್ಯಾಯಾಂಗದ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ನೊಂದವರಿಗೆ ನ್ಯಾಯ ಸಿಗಲಿ ಎಂದು ಹೇಳಿದರು.

ಸದಾಶಿವನಗರದ ನಮ್ಮ ಎದುರು ಮನೆಯಲ್ಲಿಯೇ ರಮೇಶ್ ಜಾರಕಿಹೊಳಿ ಇದ್ದಾರೆ. ನಾವು, ಅವರು ಹಲವಾರು ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ಈಗ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಕಷ್ಟದಲ್ಲಿದ್ದಾಗ ಸಹಾಯಕ್ಕೆ ಹೋಗುವುದು ಮನುಷ್ಯನ ಧರ್ಮ ಎಂದರು. ಯಾರೇ ತಪ್ಪು ಮಾಡಿದರೂ ತಪ್ಪು. ಕಾನೂನು ಯಾರನ್ನೂ ಬಿಡುವುದಿಲ್ಲ.

ನ್ಯಾಯ ಯಾರ ಕಡೆ ಇದೆಯೋ ಅವರಿಗೆ ನ್ಯಾಯ ಸಿಗಬೇಕು. ಈಗಾಗಲೇ ಎಸ್‍ಐಟಿ ತನಿಖೆ ನಡೆಸುತ್ತಿರುವುದರಿಂದ ಈ ಹಂತದಲ್ಲಿ ನಾನು ಏನು ಹೇಳುವುದಿಲ್ಲ ಎಂದು ತಿಳಿಸಿದರು. ಜಾರಕಿಹೊಳಿಯನ್ನು ಭೇಟಿಯಾಗಿದ್ದಕ್ಕೆ ಯಾವುದೇ ವಿಶೇಷ ಅರ್ಥ ಬೇಡ. ಒಂದೇ ಪಕ್ಷದಲ್ಲಿದ್ದೇವೆ. ಅವರ ಕಷ್ಟಸುಖಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯೂ ಹೌದು ಎಂದರು.

Facebook Comments