ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಮೀನಾಮೇಷ, ರೈತರ ಆಕ್ರೋಶ, ಸಿಎಂ-ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜೂ 25- ಕಬ್ಬು ಬೆಳೆಗಾರರು ಅಕ್ಷರಶಃ ಆಕ್ರೋಶಗೊಂಡಿದ್ದಾರೆ. ಕಬ್ಬಿನ ಬಿಲ್ ಪಾವತಿಸದೆ ರೈತರ ಜತೆ ಚೆಲ್ಲಾಟವಾಡುತ್ತಿರುವ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿ ಒಂದು ವಾರ ಕಳೆದರೂ ಯಾವುದೇ ರೀತಿ ಕ್ರಮ ಕೈಗೊಳ್ಳದ ತಹಸೀಲ್ದಾರ್‍ಗಳ ಮೇಲೆ ರೈತರು ಹರಿಹಾಯ್ದಿದ್ದಾರೆ.

ಸುಮಾರು 9 ಸಕ್ಕರೆ ಕಾರ್ಖಾನೆಗಳಿಂದ ಸಾವಿರಾರು ರೈತರಿಗೆ 220 ಕೋಟಿ ರೂ.ಗಳಷ್ಟು ಬಾಕಿ ಹಣ ಬರಬೇಕಿತ್ತು. ಒಂದು ವಾರದಲ್ಲಿ ಮಾಲೀಕರು ಹಣ ನೀಡದಿದ್ದರೆ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಂಡು ಕಠಿಣ ಕ್ರಮ ತೆಗೆದುಕೊಂಡು ರೈತರಿಗೆ ಬಾಕಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿಯವರು ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ನೀಡಿದ್ದ ಕಟ್ಟಪ್ಪಣೆಯನ್ನು ಪಾಲಿಸಲು ತಹಸೀಲ್ದಾರ್‍ಗಳು ಮೀನಾಮೇಷ ಎಣಿಸುತ್ತಾ ಕುಳಿತಿರುವುದು ರೈತರನ್ನು ಕೆರಳಿಸಿದೆ.

ಸಿಎಂ ಹಾಗೂ ಡಿಸಿ ಮಾತಿಗೆ ಬೆಲೆ ಇಲ್ಲವೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರತ್ತಾ ಇದೆ. ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಶಾಸಕರಗಳ ಮಾಲೀಕ್ವತದ ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ತಹಶೀಲ್ದಾರ್‍ಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಕಿ ಹಣ ಕೊಡಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರಭಾವಿ ರಾಜಕಾರಣಿಗಳ ಲಾಬಿಗೆ ಸ್ಥಳೀಯ ಆಡಳಿತ ಮಣಿಯಿತೆ? ಮತ್ತೆ ರೈತರ ಗೋಳು ಕೇಳುವವರಿಲ್ಲದಾಯಿತೇ ಎಂಬ ಅನುಮಾನ ಕಾಡತೊಡಗಿದೆ.
ಇಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಭಯ ಜÁಸ್ತಿಯಾಗಿದೆ. ಬಾಕಿ ಉಳಿಸಿಕೊಡಿರುವ ಸಕ್ಕರೆ ಕಾರ್ಖಾನೆಗಳ ಬಗ್ಗೆ ವರದಿ ಸರಕಾರ ಕೊಟ್ಟರೆ ವರ್ಗಾವಣೆಗೊಳತ್ತೀವಿ.

ಇನ್ನು ರೈತರ ಸಂಕಷ್ಟಕ್ಕಿಡಗಾದಿದ್ದಾರೆ. ನೆಮ್ಮದಿಯ ಬದುಕು ರೈತರದಲ್ಲಂತಾಗಿದೆ. ಇನ್ನು ಜೂನ್ 30 ರ ಗೊಳಗಾಗಿ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಿಂದ ಹಣವನ್ನು ರೈತರಿಗೆ ಸಕ್ಕರೆ ಸಚಿವ ಆರ್ ಬಿ ತಿಮ್ಮಾಪೂರ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ಕಾದುನೋಡೋಣಾ ಎಂದು ರೈತ ಮುಖಂಡ ಸಿದ್ದಪ್ಪ ಮೋದಗಿ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ