ವಿದ್ಯುತ್ ತಂತಿ ತಗುಲಿ ಬೆಂಕಿಗೆ ಆಹುತಿಯಾದ ಒಂದೂವರೆ ಎಕರೆ ಕಬ್ಬು ಬೆಳೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಡಿ.12- ಬೆಂಕಿ ಬಿದ್ದಿರುವ ಕಬ್ಬು ಬೆಳೆಗೆ ಪೂರ್ಣ ಹಣ ನೀಡಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.ಪಟ್ಟಣದ ಇಂಡಸ್ಟ್ರಿಸ್ ಬಡಾವಣೆಯಲ್ಲಿರುವ ಸಕ್ಕರೆ ಕಾರ್ಖಾನೆ ವಿಭಾಗೀಯ ಕಚೇರಿಗೆ ಬೀಗ ಜಡಿದು ಘೋಷಣೆ ಕೂಗಿ ಪ್ರತಿಭಟಿಸಿದರು. ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದ ಹೊರವಲಯದ ಶಿವಣ್ಣ ಎಂಬುವರಿಗೆ ಸೇರಿದ ಸುಮಾರು ಒಂದೂವರೆ ಎಕರೆಯಷ್ಟು ಕಬ್ಬಿನ ಗದ್ದೆ ವಿದ್ಯುತ್ ತಂತಿ ತಗುಲಿ ಬೆಂಕಿಯಿಂದ ನಷ್ಟವಾಗಿದೆ.

ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಬೂದಿತಿಟ್ಟು ಗುರುಸ್ವಾಮಿರವರು, ಸಕ್ಕರೆ ಕಾರ್ಖಾನೆಯವರು ನಿಗಧಿತ ಅವಧಿಯಲ್ಲಿ ಕಬ್ಬು ಕಟಾವು ಮಾಡದ ಹಿನ್ನಲೆಯಲ್ಲಿ ವಿದ್ಯುತ್ ತಂತಿ ತಗುಲಿ ಬೆಂಕಿಯಿಂದ ಇಡೀ ಬೆಳೆ ನಾಶವಾಗಿದೆ.  ಕಬ್ಬು ಬೆಳೆಯನ್ನು ಕಳೆದುಕೊಂಡ ರೈತನಿಗೆ ಇಳುವರಿ ಪರಿಪೂರ್ಣವಾಗಿ ನಷ್ಟ ಬರಿಸಿಕೊಡಬೇಕೆಂದು ಒತ್ತಾಯಿಸಿದಕ್ಕೆ, ಸಕ್ಕರೆ ಕಾರ್ಖಾನೆಯವರು ಉಡಾಫೆ ಉತ್ತರ ನೀಡಿದ್ದರಿಂದ ಆಕ್ರೋಶಗೊಂಡ ರೈತರು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.

ರೈತ ಶಿವಣ್ಣ ಮಾತನಾಡಿ, ಸಾಲ ಮಾಡಿ ಕಬ್ಬನ್ನು ಬೆಳೆದಿದ್ದೇನೆ ಸಕ್ಕರೆ ಕಾರ್ಖಾನೆಯವರು 18 ತಿಂಗಳು ಮುಗಿದಿದ್ದರೂ ಕಟಾವು ಮಾಡದೇ ಇದ್ದರಿಂದ ವಿದ್ಯುತ್ ತಂತಿ ತಗುಲಿ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸಕ್ಕರೆ ಇಲಾಖೆಯವರು ನಮಗೆ ಉಂಟಾಗಿರುವ ನಷ್ಟ ಪೂರ್ಣವಾಗಿ ಕೊಡದಿದ್ದರೆ ನಾವು ಆತ್ಮಹತ್ಯೆ ದಾರಿ ನೊಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ವಿಷಯ ತಿಳಿದು ಸ್ಥಳಕಕೆ ಆಗಮಿಸಿದ ಸಿಪಿಐ ಶ್ರೀಕಾಂತ್ ಹಾಗೂ ಉಪನೀರಿಕ್ಷಕ ರಾಜೇಂದ್ರರವರು, ಕಬ್ಬಿಗೆ ಪರಿಹಾರ ಕೊಡಿಸಲಾಗುವುದು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕರೆಯಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದ ಬಳಿಕ ಪ್ರತಿಭಟನೆ ಕೈಬಿಟ್ಟು ರೈತರು ತೆರಳಿದರು.

ತಿಮ್ಮರಾಜೀಪುರ ರಾಜು, ಯಶೋಧಮ್ಮ, ಮಲ್ಲು, ನಾಗರಾಜು, ರವಿ, ಮಲ್ಲಿಕಾರ್ಜುನ, ಕಲ್ಲೂರು ಶಾಂತರಾಜು, ಪ್ರಭುಸ್ವಾಮಿ, ಜಕ್ಕಳಿ ನಿರ್ಮಲ, ಚಿನ್ನಸ್ವಾಮಿ ಮಾಳಿಗೆ, ನಾಗರಾಜು ಸೇರಿದಂತೆ ಇತರರು ಇದ್ದರು.

Facebook Comments