ಬೇರೊಬ್ಬನ ಜೊತೆ ಪ್ರೀತಿಸಿದವಳ ನಿಶ್ಚಿತಾರ್ಥ, ಫೇಸ್ಬುಕ್ ಲೈವ್‌ನಲ್ಲಿ ಭಗ್ನ ಪ್ರೇಮಿ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಜು.22- ಪ್ರೀತಿ ಮಾಯೆ ಹುಷಾರು… ಎಂದು ಹೇಳುತ್ತಿದ್ದರೂ ಕೂಡ ಪ್ರೀತಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ… ಹಾಗೂ ಅದಕ್ಕೆ ಬಲಿಯಾದ ಪ್ರೇಮಿಗಳ ಸಂಖ್ಯೆಯೂ ಇಳಿಯುತ್ತಿಲ್ಲ.

ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿಯು ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಹಿನ್ನೆಲೆಯಲ್ಲಿ ಹುಚ್ಚು ಪ್ರೇಮಿಯೊಬ್ಬ ಫೇಸ್‍ಬುಕ್ ಲೈವ್‍ನಲ್ಲಿ ಆತ್ಮಹತ್ಯೆಗೆ ಗೆ ಶರಣಾಗಿರುವ ಘಟನೆ ಅಗ್ರಾ ಜಿಲ್ಲೆಯ ರೇಭಾ ಗ್ರಾಮದ ದೇಗುಲದ ಪಕ್ಕದಲ್ಲೇ ಸಂಭವಿಸಿದೆ. ಶ್ಯಾಮ್ ಸಿಕಾರ್ವರ್ (22) ಅಲಿಯಾಸ್ ರಾಜ್ ಫೇಸ್‍ಬುಕ್‍ನಲ್ಲಿ ಲೈವ್ ಆತ್ಮಹತ್ಯೆ ಮಾಡಿಕೊಂಡ ಹುಚ್ಚು ಪ್ರೇಮಿ.

ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಆದರಿಂದ ನನಗೆ ಬೇಸರವಾಗಿದ್ದು ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳೆಯರ ಬಳಿ ಹೇಳಿಕೊಂಡಿದ್ದಾನೆ.

ನೇಣಿಗೆ ಶರಣಾಗುವ ಮುನ್ನ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಡೆತ್‍ನೋಟ್‍ಅನ್ನು ಬರೆದಿದ್ದು ತನ್ನ ಮೃತದೇಹದ ಚಿತ್ರಗಳನ್ನು ಫೇಸ್‍ಬುಕ್‍ಗೆ ಹಾಕುವಂತೆ ಹಾಗು ತನ್ನ ದೇಹದ ಅಂಗಾಂಗಗಳನ್ನು ದಾನ ಮಾಡುವಂತೆ ಕುಟುಂಬ ದವರಲ್ಲಿ ಮನವಿ ಮಾಡಿದ್ದಾನೆ.

ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ರಾಜ್, ಪ್ರಿಯತಮೆ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಬೇಸತ್ತು ಕೆಲಸ ಬಿಟ್ಟಿದ್ದ ಎಂದು ತಿಳಿದುಬಂದಿದೆ.  ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ