ತಾಯಿಯ ಅನಾರೋಗ್ಯದಿಂದ ಮನನೊಂದಿದ್ದ ಮಗ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.20- ತಾಯಿಯ ಅನಾರೋಗ್ಯದಿಂದ ಮನನೊಂದಿದ್ದ ಯುವಕನೊಬ್ಬ ಅತಿಥಿಗೃಹ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನ ತಿರುಮಕೂಡಲಿನಲ್ಲಿ ನಡೆದಿದೆ. ತಿ.ನರಸೀಪುರ ತಾಲೂಕಿನ ಮೂಡಕನಪುರ ಗ್ರಾಮದ ನಿವಾಸಿ ಎನ್.ಮಧು(22) ಆತ್ಮಹತ್ಯೆಗೆ ಶರಣಾದ ಯುವಕ.

ಮಧು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಮಧುವಿನ ತಾಯಿ ಬಿದ್ದು ಕಾಲನ್ನು ಮುರಿದುಕೊಂಡಿದ್ದರು. ಈ ವಿಷಯ ತಿಳಿದ ಮಧು ಬೆಂಗಳೂರಿನಿಂದ ತಾಯಿ ನೋಡಲೆಂದು ಮೂಡಕನಪುರ ಗ್ರಾಮಕ್ಕೆ ಬಂದಿದ್ದಾನೆ ಈ ವೇಳೆ ತಾಯಿ ನಡೆಯಲು ಆಗದೆ ಇದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಮನನೊಂದಿದ್ದನು.

ಏ. 16ರಂದು ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೊರಟಿದ್ದಾನೆ. ಆದರೆ ಈತ ತಿರಕೂಡಲಿನಲ್ಲಿರುವ ಅತಿಥಿಗೃಹದಲ್ಲಿ ಕೊಠಡಿಯೊಂದನ್ನು ಪಡೆದಿದ್ದಾನೆ. ನಿನ್ನೆ ಸಂಜೆಯಾದರು ರೂಮಿನಿಂದ ಹೊರಗೆ ಬಾರದೆ ಇರುವುದನ್ನು ಗಮನಿಸಿದ ಹೊಟೇಲ್ ಕೆಲಸಗಾರರು ಕಿಟಕಿ ತೆಗೆದು ನೋಡಿದಾಗ.

ಮಧು ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಈ ಸಂಬಂಧ ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ