ಆಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ, ಕಾರ್ ಬಾಂಬ್ ಸ್ಪೋಟದಲ್ಲಿ 9 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಅ.1-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದಾರೆ. ದಕ್ಷಿಣ ಆಫ್ಗನ್‍ನ ಮಿಲಿಟರಿ ಚೆಕ್‍ ಪೋಸ್ಟ್ ನಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ಸೋಟದಲ್ಲಿ ನಾಲ್ವರು ನಾಗರಿಕರೂ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.

ನಹರಿ ಸಾರಾ ಜಿಲ್ಲೆಯಲ್ಲಿ ಸೇನಾ ತಪಾಸಣಾ ಠಾಣ್ಯವನ್ನು ಗುರಿಯಾಗಿಟ್ಟುಕೊಂಡು ಉಗ್ರರು ಕಾರ್ ಬಾಂಬ್ ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಚೆಕ್‍ ಪೋಸ್ಟ್ ಮೂಲಕ ಚಲಿಸುತ್ತಿದ್ದ ವಾಹನವೊಂದು ಸೋಟಗೊಂಡು ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ಒಂಭತ್ತು ಮಂದಿ ಹತರಾದರು ಎಂದು ಹೆಲ್ಮಂಡ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಓಮರ್ ಝ್ವಾಕ್ ತಿಳಿಸಿದ್ದಾರೆ.

ಇದೇ ಜಿಲ್ಲೆಯಲ್ಲಿ ಮೊನ್ನೆ ರಾತ್ರಿ ಬಂಡುಕೋರರ ದಾಳಿಯಲ್ಲಿ ಮೂವರು ಯೋಧರು ಮತ್ತು ಕೆಲ ನಾಗರಿಕರು ಗಾಯಗೊಂಡಿದ್ದರು. ಈ ಎರಡೂ ಘಟನೆಗಳಲ್ಲಿ ತಾಲಿಬಾನ್ ಉಗ್ರಗಾಮಿಗಳ ಕೈವಾಡ ಇದೆ ಎಂದು ಹೇಳಲಾಗಿದೆ.

Facebook Comments

Sri Raghav

Admin