6ನೇ ತಿಂಗಳ ಪುಣ್ಯತಿಥಿ, ಅಂಬಿ ಸಮಾಧಿಗೆ ಸುಮಲತಾ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24- ರೆಬೆಲ್ ಸ್ಟಾರ್ ದಿ.ಅಂಬರೀಷ್ ಅವರ ಸಮಾಧಿ ಸ್ಥಳಕ್ಕೆ ಇಂದು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ತೆರಳಿ ಪೂಜೆ ಸಲ್ಲಿಸಿದರು.
ಅಂಬರೀಷ್ ಅವರ 6ನೇ ತಿಂಗಳ ಪುಣ್ಯತಿಥಿ ಹಿನ್ನೆಲೆಯಲ್ಲಿ ಅಂಬಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಿನ್ನೆಯಷ್ಟೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಸುಮಲತಾ ಅವರು ಗೆಲುವಿನ ಪ್ರಮಾಣಪತ್ರವನ್ನು ಸಹ ಇಂದು ಅಂಬರೀಷ್ ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಿದರು.

ಈ ವೇಳೆ ಅಲ್ಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಎಂಬ ಮೂವರು ಅಭ್ಯರ್ಥಿಗಳು ಸಹ ಸ್ಪರ್ಧಾ ಕಣದಲ್ಲಿದ್ದರು. ಈ ಮೂವರಿಗೆ ಬಂದಂತಹ ಮತಗಳು ನನಗೆ ಬರಬೇಕಿತ್ತು. ಆ ಮತಗಳು ಲಭಿಸಿದ್ದರೆ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ನಾನು ಜಯ ಗಳಿಸುತ್ತಿದ್ದೆ ಎಂದರು.

ಇದು ನನ್ನ ಗೆಲುವು ಅಲ್ಲ, ಸ್ವಾಭಿಮಾನದ ಗೆಲುವು. ಜನ ನನ್ನ ಪರ ಇದ್ದಾರೆ. ನನ್ನ ಕೈಯಲ್ಲಿ ಆಗುವಷ್ಟು ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ. ಅಂಬರೀಷ್ ಅವರ ಕನಸನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ತಿಂಗಳು 29ರಂದು ಅಂಬರೀಷ್ ಅವರ ಹುಟ್ಟುಹಬ್ಬ ಇದ್ದು, ಅಂದೇ ಸ್ವಾಭಿಮಾನದ ವಿಜಯೋತ್ಸವ ಎಂಬ ಹೆಸರಿನಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಲಾಗುವುದು ಅಂದು ನಟರಾದ ದರ್ಶನ್, ಯಶ್ ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.  ಈ ವೇಳೆ ನಿರ್ದೇಶಕ ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ