ಟೆನ್ನಿಸ್ ಪಟು ಸುಮಿತ್ ನಗಲ್‍ಗೆ ಎಟಿಪಿ ಚಾಲೆಂಜರ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯೂನಸ್‍ಏರಿಸ್ (ಅರ್ಜೆಂಟೈನಾ), ಸೆ.30- ಭಾರತದ ಪ್ರತಿಭಾವಂತ ಟೆನ್ನಿಸ್ ಪಟು ಸುಮಿತ್ ನಗಲ್ ಎಟಿಪಿ ಚಾಲೆಂಜರ್ ಪಂದ್ಯಾವಳಿಯ ಪುರುಷರ ವಿಭಾಗದ ಫೈನಲ್‍ನಲ್ಲಿ ಅರ್ಜೆಂಟೈನಾದ ಪ್ರಬಲ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಗೆಲುವಿನೊಂದಿಗೆ 26 ಪಾಯಿಂಟ್‍ಗಳನ್ನು ಗಳಿಸಿದ ಅವರು ವಿಶ್ವ ಟೆನ್ನಿಸ್ ಶ್ರೇಯಾಂಕ ಪಟ್ಟಿಯಲ್ಲಿ 135ನೆ ಸ್ಥಾನಕ್ಕೆ ಜಿಗಿದಿದ್ದಾರೆ.

ಬ್ಯೂನಸ್‍ಏರಿಸ್‍ನಲ್ಲಿ ನಡೆದ 54,160 ಡಾಲರ್ ಬಹುಮಾನ ಮೊತ್ತದ ಎಟಿಬಿ ಚಾಲೆಂಜರ್ಸ್ ಪುರುಷರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಹರಿಯಾಣದ 22 ವರ್ಷದ ಸುಮಿತ್ 8ನೆ ಶ್ರೇಯಾಂಕದ ಅರ್ಜೆಂಟೈನಾದ ಪಟು ಫಾಕುಂಡೊ ಬೊಗ್ನಿಸ್ ಅವರನ್ನು ನೇರ ಸೆಟ್‍ಗಳಿಂದ ಮಣಿಸಿ ಪ್ರಶಸ್ತಿ ಗೆದ್ದರು.

1ಗಂಟೆ 37 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸುಮಿತ್ 6-4, 6-2 ನೇರ ಸೆಟ್‍ಗಳಿಂದ ಬೋಗ್ನಿಸ್ ಅವರನ್ನು ಸುಲಭವಾಗಿ ಸೋಲಿಸಿ ಪುರುಷರ ಫೈನಲ್ ಪ್ರಶಸ್ತಿ ಗೆದ್ದರು.
ಇದು ಸುಮಿತ್ ಗೆದ್ದ ಎರಡನೆ ಎಟಿಪಿ ಚಾಲೆಂಜರ್ಸ್ ಪ್ರಶಸ್ತಿ 2007ರಲ್ಲಿ ಬೆಂಗಳೂರು ಎಟಿಪಿ ಚಾಲೆಂಜರ್ಸ್ ಪ್ರಶಸ್ತಿಯನ್ನು ಸುಮಿತ್ ಮುಡಿಗೇರಿಸಿದರು.

ಹರಿಯಾಣದ ಟೆನ್ನಿಸ್ ತಾರೆ ಗೆಲುವಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅಭಿನಂದನೆ ಸಲ್ಲಿಸಿದ್ದಾರೆ.

Facebook Comments