ಅಪ್ಪುಗಾಗಿ ಗುಬ್ಬಿಯಿಂದ ಕಡಲೆಪುರಿ ಹಾರ ತಂದ ಸುಮಿತ್ರಾಬಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಗುಬ್ಬಿಯಿಂದ ಬೆಂಗಳೂರಿಗೆ ಬಂದ 70 ವರ್ಷದ ವಯೋ ವೃದ್ಧೆ ಸುಮಿತ್ರಾಬಾಯಿ ಡಾ.ರಾಜ್‍ಕುಮಾರ್ ಹಾಗೂ ಪುನೀತ್ ಸಮಾಗೆ ಅರ್ಪಿಸಲು ತನ್ನ ಕೈಯಾರೆ ತಯಾರಿಸಿದ್ದ ಹೂವಿನ ಹಾರವನ್ನು ತಂದು ಸಮರ್ಪಿಸಿದರು.

ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ನಿವಾಸಿಯಾಗಿರುವ ಸುಮಿತ್ರಾಬಾಯಿ ಅವರಿಗೆ ಡಾ.ರಾಜ್‍ಕುಮಾರ್ ಅವರಿಗೆ ಅಚ್ಚುಮೆಚ್ಚಿನ ಪ್ರೀತಿ. ಅದರಂತೆ ಪುನೀತ್ ರಾಜ್‍ಕುಮಾರ್ ಅವರ ಚಿತ್ರಗಳನ್ನು ನೋಡಿ ಅಣ್ಣಾವ್ರನ್ನೇ ಕಂಡಂತೆ ಭಾಸವಾಗುತ್ತಿತ್ತು. ಅವರ ಚಿತ್ರಗಳಲ್ಲಿದ್ದ ಸಂದೇಶಗಳು ಸಮಾಜಕ್ಕೆ ಸೂರ್ತಿ. ಇಂತಹ ಮಹನೀಯರಿಗೆ ನನ್ನ ಕೈಲಾದ ಶ್ರದ್ಧಾಂಜಲಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ಕುಟುಂಬದವರೆಲ್ಲರೂ ಸೇರಿ ಕಡಲಪುರೆ, ಬತಾಸ್‍ನಿಂದ ತಯಾರಿಸಿದ ಹೂವಿನ ಹಾರ ತಂದಿದ್ದೇನೆ.

ಕಳೆದ ಮೂರು ದಿನದಿಂದ ಇದನ್ನು ತಯಾರಿಸಲು ಶುರು ಮಾಡಿ ಇದನ್ನು ತಂದು ಸಮರ್ಪಿಸಿದ್ದೇನೆ ಎಂದು ಸುಮಿತ್ರಾಬಾಯಿ ಭಾವುಕರಾದರು.

Facebook Comments