ಸೆಕೆಂಡ್ ಸಂಡೆ ಲಾಕ್‍ಡೌನ್‍ : 33 ಗಂಟೆ ಸ್ಥಬ್ದವಾಗಲಿದೆ ಕರ್ನಾಟಕ, ಏನಿರುತ್ತೆ ಏನಿರಲ್ಲ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.11- ಸೆಕೆಂಡ್ ಸಂಡೆ ಲಾಕ್‍ಡೌನ್‍ಗೆ ರಾಜ್ಯ ಸಜ್ಜಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಂಡೆ ಲಾಕ್‍ಡೌನ್ ವಿಧಿಸಿದ್ದು, ಇಂದು ರಾತ್ರಿ 8 ಗಂಟೆಯಿಂದಲೇ ರಾಜಧಾನಿ ಸೇರಿದಂತೆ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ.

ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕಫ್ರ್ಯೂ ಜಾರಿಯಾಗಲಿದ್ದು, ತುರ್ತು ಅಗತ್ಯಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಲಿವೆ.

ಕೊರೊನಾ ಸೋಂಕು ದಿನೇ ದಿನೇ ವ್ಯಾಪಿಸುತ್ತಿದೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. ನಿನ್ನೆ 2313 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 33,418ಕ್ಕೆ ಏರಿಕೆಯಾಗಿದೆ.

13,836 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 19,035 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಸಂಖ್ಯೆ ಏರುಮುಖವಾಗುತ್ತಲೇ ಇದೆ. ನಿಯಂತ್ರಣಕ್ಕಾಗಿ ಕಳೆದ ವಾರದಿಂದ ರಾಜ್ಯ ಸರ್ಕಾರ ಸಂಡೆ ಲಾಕ್‍ಡೌನ್ ವಿಧಿಸಿದ್ದು, ನಾಳೆ ಎರಡನೆ ಲಾಕ್‍ಡೌನ್‍ಅನ್ನು ಜನ ಎದುರಿಸಬೇಕಾಗಿದೆ.

ಹಣ್ಣು, ತರಕಾರಿ, ದಿನಸಿ ಪದಾರ್ಥ, ಮಾಂಸ ಮಾರಾಟಕ್ಕೆ ಅವಕಾಶವಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್‍ಗಳು ತೆರೆದಿರುತ್ತವೆ. ಹೊಟೇಲ್‍ಗಳಿಗೆ ಪಾರ್ಸಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಎಲ್ಲ ಪಾರ್ಕ್‍ಗಳನ್ನೂ ಬಂದ್ ಮಾಡಲಾಗುವುದು. ಆಟೋ, ಕ್ಯಾಬ್, ಬೈಕ್ ರಸ್ತೆಗಿಳಿಯುವಂತಿಲ್ಲ.

ಬಾರ್, ಸಲೂನ್, ಬ್ಯೂಟಿಪಾರ್ಲರ್ ಯಾವುದೂ ತೆರೆಯುವಂತಿಲ್ಲ. ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟವಿಲ್ಲ. ಗಾರ್ಮೆಂಟ್ಸ್, ಕಾರ್ಖಾನೆ ಕಂಪೆನಿಗಳು ಬಂದ್ ಆಗಲಿವೆ. ಬೆಂಗಳೂರಿನಲ್ಲಿ ಎಲ್ಲ ಫ್ಲೈ ಓವರ್‍ಗಳು ಇಂದು ಸಂಜೆಯಿಂದಲೇ ಬಂದ್ ಆಗಲಿವೆ.

Facebook Comments

Sri Raghav

Admin