ಕೇರಳದಲ್ಲಿ ಸಂಡೇ ಲಾಕ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ, ಜ.23- ಕೋವಿಡ್-19ರ ಮೂರನೆ ಅಲೆಯನ್ನು ತಗ್ಗಿಸಲು ಕೇರಳದಲ್ಲಿ ವಿಸಲಾಗಿರುವ ಒಂದು ದಿನದ ಲಾಕ್‍ಡೌನ್ ಭಾನುವಾರ ಆರಂಭಗೊಂಡಿದ್ದು, ರಾಜ್ಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ.

ಗುರುವಾರ ನಡೆದ ಉನ್ನತ ಮಟ್ಟದ ಕೋವಿಡ್ ಪರಾಮರ್ಶನಾ ಸಭೆಯಲ್ಲಿ ಜ.23 ಮತ್ತು 30ರ ಭಾನುವಾರಗಳಂದು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ವಿಸುವ ನಿರ್ಧಾರ ಕೈಗೊಳ್ಳಲಾಯಿತು.

ಹಾಲು, ವಾರ್ತಾ ಪತ್ರಿಕೆ, ಮೀನು, ಮಾಂಸ, ಹಣ್ಣು ಮತ್ತು ತರಕಾರಿಗಳು ಮತ್ತು ದಿನಸಿ ಅಂಗಡಿಗಳಂಥ ಅಗತ್ಯ ಸೇವೆಗಳಿಗೆ ಮಾತ್ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆತನಕ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

Facebook Comments

Sri Raghav

Admin