ವೈರಿಯ ಗುಂಡಿಗೆ ಎದೆಯೊಡ್ಡಿ ದಾಳಿ ನಡೆಸುವ ಯೋಧರ ಧೈರ್ಯ ನಿಜಕ್ಕೂ ಅದ್ಭುತ

ಈ ಸುದ್ದಿಯನ್ನು ಶೇರ್ ಮಾಡಿ

# ಸುನೀಲ್‌ರಾಜೇನಹಳ್ಳಿ
ಭಾರತೀಯ ಸೇನೆ ಎಂದ ತಕ್ಷಣ ಏನೋ ರೋಮಾಂಚನ. ಗಡಿ ನುಸುಳುವ ವೈರಿಗಳ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ನಡೆಸುವ ಸೈನಿಕರನ್ನು ನೆನೆದರೆ ಮೈ ಜುಮ್ ಎನ್ನುವುದು. ನಮ್ಮ ಸೈನಿಕರು ನೋಡಲು ಎಷ್ಟು ಖಡಕ್ ಆಗಿರುವರೋ ಸೇವೆಯಲ್ಲಿಯೂ ಅಷ್ಟೇ ಚತುರರಾಗಿರುವರು.

1948 ಜನವರಿ 15ರಂದು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರಿಯಪ್ಪ ಮೊದಲ ಭಾರತೀಯ ಕಮಾಂಡರ್ ಇನ್ ಚಿಫ್ ಆಗಿ ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಭಾರತದ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಯುದ್ಧ ನೈಸರ್ಗಿಕ ವಿಕೋಪಗಳಂತ ಸನ್ನಿವೇಶಗಳೊಂದಿಗೆ ಹೋರಾಡಲು ಹಾಗೂ ಧೈರ್ಯದಿಂದ ಎಲ್ಲಾ ತೊಂದರೆ ಸವಾಲುಗಳನ್ನು ಎದುರಿಸಿ ರಾಷ್ಟ್ರದ ಜನರನ್ನು ರಕ್ಷಿಸಲು ಸದಾ ಸಿದ್ಧರಾಗಿರುತ್ತಾರೆ.

ಅವರ ನೆನಪಿಗಾಗಿ ಇಂಡಿಯಾ ಗೇಟ್ ನಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಲಾಗುತ್ತದೆ. 1947 ರಲ್ಲಿ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡು ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನ ದೇಶವು ಜಮ್ಮು ಮತ್ತು ಕಾಶ್ಮೀರವನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಮ್ಮ ದೇಶದ ಮೇಲೆ ದಾಳಿ ನಡೆಸುತ್ತಲೇ ಇದೆ.

ಚೀನಾ ದೇಶ ನಾನಾ ರೀತಿಯಲ್ಲಿ ನಮ್ಮ ದೇಶಕ್ಕೆ ಉಪಟಲ ನೀಡುತ್ತಲೇ ಬಂದಿದೆ. ಇಂತಹ ದಾಳಿಗಳಾದಾಗ ವೈರಿ ರಾಷ್ಟ್ರಗಳ ಸದ್ದಡಗಿಸಿದ ನಮ್ಮ ಸೇನೆ ರಾತ್ರಿ-ಹಗಲೆನ್ನದೆ, ಬಿಸಿಲು ಗಾಳಿ-ಮಳೆ ಹಿಮಪಾತ ಯಾವುದನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುವ ಸೈನಿಕರ ಎಂಟೆದೆ ಗುಂಡಿಗೆಯನ್ನು ಮೆಚ್ಚ ಬೇಕಾದದ್ದೇ, ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಭಾರತಾಂಬೆಯ ರಕ್ಷಣೆಯೊಂದೇ ತಮ್ಮ ದ್ಯೇಯಾವಾಗಿಸಿಕೊಂಡ ಸೈನಿಕರನ್ನು ಪಡೆದ ನಾವೇ ಧನ್ಯರು.

ದೇಶದೊಳಗೆ ಭೂಕಂಪ,ಚಂಡಮಾರುತ, ನೆರೆ ಮುಂತಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವ ಸೇನಾ ಯೋಧರು ತಮ್ಮ ಪ್ರಾಣದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸುವ ಯೋಧರ ಧೈರ್ಯ ನಿಜಕ್ಕೂ ಅದ್ಭುತ.

#ಸಿಯಾಚಿನ್ ಪ್ರದೇಶದಲ್ಲಿ ಪ್ರತಿಕ್ಷಣವೂ ಗಡಿ ಕಾಯುವ ಸೇನೆ. 1984ರ ಏಪ್ರಿಲ್ 13ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಹಲವರು ಸೈನಿಕರು ಹುತಾತ್ಮರಾಗಿದ್ದಾರೆ. ಸಮುದ್ರಮಟ್ಟಕ್ಕಿಂತ 6000 ಮೀಟರ್‍ಗಳಿಗೂ ಎತ್ತರವಿರುವ ಈ ಪ್ರದೇಶ ವಿಶ್ವದ ಅತ್ಯಂತ ಎತ್ತರದ ರಣರಂಗವಾಗಿದೆ. ವಾಸ್ತವವಾಗಿ ಯುದ್ಧದ ನೇರ ಪ್ರಹಾರಗಳಿಗಿಂತ ಹವಾಮಾನ ವೈಪರಿತ್ಯದಿಂದಲೇ ಹೆಚ್ಚಿನ ಸೈನಿಕರು, ಅಂದರೆ ಸರಿಸುಮಾರು ಶೇ.97ರಷ್ಟು ಸೈನಿಕರು ಪ್ರಾಣತೆತ್ತಿದ್ದಾರೆ. ಇಂತಹ ಸೂಕ್ಷ ್ಮ ಪ್ರದೇಶ ಗಳಲ್ಲಿ ತಮ್ಮ ಸೇನಾ ನೆಲೆಯನ್ನು ಸ್ಥಾಪಿಸಿ ಗಡಿಯಿಂದ ಶತ್ರುಗಳು ದೇಶದೊಳಕ್ಕೆ ನುಸುಳದಿರುವಂತೆ ಪ್ರತಿಕ್ಷಣವು ಸೈನಿಕರು ಕಾವಲು ಕಾಯುತ್ತಿದ್ದಾರೆ.

#ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ 2019:
ಪುಲ್ವಾಮ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರ ಸಾವಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಏರ್ ಸ್ಟ್ರೈಕ್ ನಡೆಸಿದ್ದು 2019 ಫೆ. 26ರ ನಸುಕಿನ ಜಾವ ಸುಮಾರು 3.30ರಿಂದ 3.55ರ ನಡುವೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುದಳ 12 ಮಿರಾಜ್ 2000 ಯುದ್ಧ ವಿಮಾನಗಳಿಂದ ಬಾಲಕೋಟ್ ಉಗ್ರ ಶಿಬಿರಗಳ ಮೇಲೆ ನಡೆದ ದಾಳಿಯಲ್ಲಿ ಸುಮಾರು 300 ಉಗ್ರರು ಹತರಾಗಿದ್ದಾರೆ. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಲೋಮೀಟರ್ ಒಳನುಗ್ಗಿ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು, ಭಾರತೀಯ ಸೇನೆಯ ಸಾಮಥ್ರ್ಯವನ್ನು ಬಹಿರಂಗ ಪಡಿಸಿತ್ತು.

ಇಂತಹ ಅನೇಕ ಸರ್ಜಿಕಲ್ ಸ್ಟ್ರೈಕ್‍ಗಳನ್ನು ಭಾರತೀಯ ಸೇನೆ ಸಂಘಟಿಸಿ, ಭಾರತೀಯ ಯೋಧರು ಪರಾಕ್ರಮ ಮೆರೆದಿದ್ದರೆ. ಈ ಮೂಲಕ ಇಡೀ ವಿಶ್ವಕ್ಕೆ ಇಂಡಿಯನ್ ಆರ್ಮಿ ಸಾಮಥ್ರ್ಯವನ್ನು ಪರಿಚಯಿಸಿದ್ದಾರೆ.

Facebook Comments